
ಅಕ್ಷರ್ ಪಟೇಲ್, ಶುಭಮನ್ ಗಿಲ್
(ಚಿತ್ರ ಕೃಪೆ: ಬಿಸಿಸಿಐ)
ಪರ್ತ್: ಭಾರತ ತಂಡದ ಏಕದಿನ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಉಪಸ್ಥಿತಿಯು ಹೊಸದಾಗಿ ಏಕದಿನ ತಂಡಕ್ಕೆ ನಾಯಕನಾಗಿ ನೇಮಕಗೊಂಡಿರುವ ಶುಭ್‌ಮನ್ ಗಿಲ್ ಅವರನ್ನು ನಾಯಕನಾಗಿ ಬೆಳೆಯಲು ಸಹಾಯ ಮಾಡುತ್ತದೆ ಎಂದು ಭಾರತ ತಂಡದ ಆಲ್‌ರೌಂಡರ್ ಅಭಿಪ್ರಾಯಪಟ್ಟಿದ್ದಾರೆ.
ಪರ್ತ್ ಮೈದಾನದಲ್ಲಿ ಭಾನುವಾರ ನಡೆಯಲಿರುವ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ತಂಡದ ಅಭ್ಯಾಸದ ಬಳಿಕ ಮಾತನಾಡಿದ ಅಕ್ಷರ್, ‘ಮಾರ್ಚ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ನಂತರ ಭಾರತ ಪರ ಆಡದೆ ಇದ್ದರೂ ಕೂಡ ರೋಹಿತ್ ಮತ್ತು ಕೊಹ್ಲಿ ಮೈದಾನದಲ್ಲಿ ಎಂದಿನಂತೆ ಚುರುಕಾಗಿ ಕಾಣುತ್ತಿದ್ದಾರೆ’ ಎಂದು ಹೇಳಿದರು.
‘ಗಿಲ್‌ಗೆ ಇದು ಉತ್ತಮ ಸಮಯ. ರೋಹಿತ್ ಭಾಯ್ ಮತ್ತು ವಿರಾಟ್ ಭಾಯ್ ಇದ್ದಾರೆ. ಅವರ ಸಮ್ಮುಖದಲ್ಲಿ ಉತ್ತಮ ನಾಯಕರಾಗುವ ಅವಕಾಶ ಅವರಿಗಿದೆ. ಇದು ಗಿಲ್ ನಾಯಕತ್ವ ಬೆಳವಣಿಗೆಗೆ ಉತ್ತಮ ವೇದಿಕೆಯಾಗಿದೆ’ ಎಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರೊಂದಿಗಿನ ಜಂಟಿ ಸಂವಾದದಲ್ಲಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.