
ಇಂದೋರ್: ಭಾರತ ಕ್ರಿಕೆಟ್ ತಂಡ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2–1ರಿಂದ ಕೈಚೆಲ್ಲಿದೆ. ಆ ಮೂಲಕ ನ್ಯೂಜಿಲೆಂಡ್ ತಂಡ ಭಾರತದಲ್ಲಿ 38 ವರ್ಷಗಳ ಬಳಿಕ ಏಕದಿನ ಸರಣಿ ಗೆದ್ದ ಸಾಧನೆ ಮಾಡಿತು. ಪಂದ್ಯದ ಬಳಿಕ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಅವರು ಸೋಲಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
‘ನಾವು ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ ಎಂದು ನನಗೆ ಅನಿಸಿಲ್ಲ. ಆದರೆ, ಉತ್ತಮವಾಗಿ ಬ್ಯಾಟಿಂಗ್ ಆರಂಭಿಸಿದ ನಂತರ, ಅದನ್ನು ದೊಡ್ಡ ಮೊತ್ತವಾಗಿ ಪರಿಗಣಿಸುವಲ್ಲಿ ವಿಫಲವಾದೆವು. ದೊಡ್ಡ ಗುರಿ ಬೆನ್ನಟ್ಟುವಾಗ ಕನಿಷ್ಠ ಇಬ್ಬರು ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕಬೇಕಾಗುತ್ತದೆ’ ಎಂದರು.
ನ್ಯೂಜಿಲೆಂಡ್‌ಗೂ ನಮಗೂ ವ್ಯತ್ಯಾಸ
‘ನಮ್ಮ ಬ್ಯಾಟರ್‌ಗಳು ಉತ್ತಮ ಆರಂಭ ಪಡೆದುಕೊಂಡಿದ್ದರ ಹೊರತಾಗಿಯೂ ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ಸಾಧ್ಯವಾಗಿಲ್ಲ. ಉದಾಹರಣೆಗೆ ನಾನು ಮೊದಲ ಎರಡು ಪಂದ್ಯಗಳಲ್ಲಿ ಸೆಟ್ ಆದೆ. ಆದರೆ ಅದನ್ನು 100, 120 ಅಥವಾ 130 ರನ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಆದರೆ, ನ್ಯೂಜಿಲೆಂಡ್ ಬ್ಯಾಟರ್‌ಗಳು ದೊಡ್ಡ ಮೊತ್ತ ಕಲೆಹಾಕಿದರು. ನಮ್ಮ ಬ್ಯಾಟಿಂಗ್ ವಿಭಾಗ ಇನ್ನೂ ಉತ್ತಮಗೊಳ್ಳಬೇಕಿದೆ’ ಎಂದರು.
ರವೀಂದ್ರ ಜಡೇಜಾ ಪ್ರದರ್ಶನದ ಕುರಿತು ಮಾತನಾಡಿದ ಗಿಲ್, ‘ಹೌದು, ಕಳೆದ ಎರಡು ವರ್ಷಗಳಿಂದ ಜಡ್ಡು ಭಾಯ್ ನಮ್ಮ ಪ್ರಮಖ ಆಟಗಾರರಾಗಿದ್ದಾರೆ. ಆದರೆ, ಈ ಸರಣಿಯಲ್ಲಿ ಅವರು ಅಂದುಕೊಂಡಷ್ಟು ವಿಕೆಟ್‌ಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಇದು ದುರದೃಷ್ಟಕರ. ಆದರೆ ಕೆಲವೊಮ್ಮೆ ಇದು ಸಂಭವಿಸುತ್ತದೆ. ವೈಫಲ್ಯಗಳನ್ನು ಅರ್ಥಮಾಡಿಕೊಂಡಾಗ ಮಾತ್ರ ನೀವು ಬೆಳಯಲು ಸಾಧ್ಯ’ ಎಂದರು.
ಇನ್ನೂ ಭಾರತದ ಕ್ಷೇತ್ರ ರಕ್ಷಣೆಯ ಬಗ್ಗೆ ಗಿಲ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆಟದ ಪ್ರಮುಖ ಹಂತದಲ್ಲಿ ನಾವು ಕೆಲವು ಕ್ಯಾಚ್‌ಗಳನ್ನು ಕೈಚೆಲ್ಲಿದೆವು. ಬೌಲರ್‌ಗಳು ಅವಕಾಶ ಸೃಷ್ಟಿಸಿದಾಗ ನಾವು ಅದನ್ನು ಕೈಚೆಲ್ಲಿದರೆ, ಪಂದ್ಯದ ಹಿಡಿತ ಕಳೆದುಕೊಳ್ಳುತ್ತೇವೆ. ಯಾರೂ ಉದ್ದೇಶಪೂರ್ವಕವಾಗಿ ಕ್ಯಾಚ್ ಬಿಡುವುದಿಲ್ಲ. ಆದರೆ ನಾವು ಸುಧಾರಿಸಿಕೊಳ್ಳಬೇಕು’ ಎಂದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.