ADVERTISEMENT

ಎರಡನೇ ಟೆಸ್ಟ್‌ನಲ್ಲೂ ಗಿಲ್ ಆಡುವುದು ಅನುಮಾನ: 4ನೇ ಕ್ರಮಾಂಕದಲ್ಲಿ ಆಡುವವರು ಯಾರು?

ಪಿಟಿಐ
Published 20 ನವೆಂಬರ್ 2025, 10:33 IST
Last Updated 20 ನವೆಂಬರ್ 2025, 10:33 IST
<div class="paragraphs"><p>ಗಿಲ್ ಹಾಗೂ ಜುರೇಲ್</p></div>

ಗಿಲ್ ಹಾಗೂ ಜುರೇಲ್

   

- ಪಿಟಿಐ ಚಿತ್ರ

ಗುವಾಹಟಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಕುತ್ತಿಗೆ ಸ್ನಾಯು ಸೆಳೆತದ ಸಮಸ್ಯೆಗೆ ಒಳಗಾಗಿದ್ದ ನಾಯಕ ಶುಭಮನ್ ಗಿಲ್ ಪಂದ್ಯದಿಂದಲೇ ಹೊರಗುಳಿದಿದ್ದರು. ಎರಡನೇ ಪಂದ್ಯದಲ್ಲಿ ಆಡುವ ಪ್ರಯತ್ನದ ಕೊನೆಯ ಭಾಗವಾಗಿ ಅವರು ಶುಕ್ರವಾರ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ಬ್ಯಾಟಿಂಗ್ ಕೋಚ್ ಸೀತಾಂಶು ಕೊಟಕ್ ತಿಳಿಸಿದ್ದಾರೆ.

ADVERTISEMENT

ರಡನೇ ಪಂದ್ಯದ ವೇಳೆಗೆ ಗಿಲ್ ಗುಣಮುಖರಾಗುವ ಅವಕಾಶ ಕಡಿಮೆ ಇದ್ದರೂ, ಬಿಸಿಸಿಐನ ಕ್ರೀಡಾ ವಿಜ್ಞಾನ ತಂಡ ಶುಕ್ರವಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ ಶನಿವಾರದಿಂದ ಪ್ರಾರಂಭವಾಗಲಿದೆ.

ಗಿಲ್ ಅವರ ಫಿಟ್‌ನೆಸ್ ಕುರಿತು ಪ್ರತಿಕ್ರಿಯೆ ನೀಡಿದ ಬ್ಯಾಟಿಂಗ್ ತರಬೇತುದಾರ ಸೀತಾಂಶು ಕೊಟಕ್, ‘ನಾನು ನಿನ್ನೆ ಅವರನ್ನು ಭೇಟಿಯಾಗಿದ್ದೆ. ಅವರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಎರಡನೇ ಟೆಸ್ಟ್‌ನಲ್ಲಿ ಅವರು ಕಣಕ್ಕಿಳಿಯುತ್ತಾರಾ? ಅಥವಾ ಇಲ್ಲವಾ? ಎಂಬ ನಿರ್ಧಾರವನ್ನು ಶುಕ್ರವಾರ ತೆಗೆದುಕೊಳ್ಳಲಾಗುವುದು. ಒಂದುವೇಳೆ ಅವರು ಪೂರ್ಣವಾಗಿ ಚೇತರಿಸಿಕೊಂಡರೂ, ನೋವು ಮರುಕಳಿಸುವ ಸಾಧ್ಯತೆ ಇದೆ ಹಾಗಾಗಿ ಅವರು ಆಡುವುದನ್ನು ವೈದ್ಯರು ನಿರ್ಧರಿಸಬೇಕು’ ಎಂದು ಹೇಳಿದ್ದಾರೆ.

‘ಶುಭಮನ್‌ ಅವರಂತಹ ಆಟಗಾರನನ್ನು ನಾವು ಖಂಡಿತವಾಗಿಯೂ ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಗಿಲ್ ಅನುಪಸ್ಥಿತಿಯ ಪರಿಣಾಮವನ್ನು ಕೋಚ್ ಒಪ್ಪಿಕೊಂಡರು.

‘ಗಿಲ್ ತಂಡಕ್ಕಾಗಿ ಆಡಬೇಕೆಂದು ನಾವು ಬಯಸುತ್ತೇವೆ. ಒಂದುವೇಳೆ ಅವರು ಆಡದಿದ್ದರೆ ನಮಗೆ ಉತ್ತಮ ಬದಲಿ ಆಟಗಾರ ಸಿಗುತ್ತಾನೆ. ಆ ಆಟಗಾರ ಶತಕ ಗಳಿಸುವ ಸಾಮರ್ಥ್ಯ ಹೊಂದಿರುತ್ತಾನೆ’ ಎಂದರು.

ಕೊಲ್ಕತ್ತದಲ್ಲಿ ನಡೆದ ಮೊದಲ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಧ್ರುವ್ ಜುರೆಲ್ 4 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದರು. ಈಗಲೂ ಅವರೇ ಆಡಬಹುದು ಅಥವಾ ಗಿಲ್ ಜಾಗದಲ್ಲಿ ಸಾಯಿ ಸುದರ್ಶನ್ ಆಡುವ ಸಾಧ್ಯತೆ ಇದೆ.

‘ಜುರೆಲ್ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಆದರೆ, ಶುಭಮನ್ ಫಿಟ್‌ನೆಸ್ ಕುರಿತು ಅಂತಿಮ ವರದಿ ಬರುವವರೆಗೂ ನಾವು ಅವರ ಜಾಗದಲ್ಲಿ ಯಾರು ಆಡುತ್ತಾರೆ ಎಂಬುದನ್ನು ಚರ್ಚಿಸುವ ಅಗತ್ಯವಿಲ್ಲ’ ಎಂದು ಕೊಟಕ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.