ADVERTISEMENT

ದ.ಆಫ್ರಿಕಾ ವಿರುದ್ಧ ರಝಾ ಮಿಂಚು; ಮ್ಯಾಚ್ ಸೋತರೂ ಪಂದ್ಯಶ್ರೇಷ್ಠ ಪಡೆದ ಸಿಕಂದರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮಾರ್ಚ್ 2026, 15:45 IST
Last Updated 1 ಮಾರ್ಚ್ 2026, 15:45 IST
<div class="paragraphs"><p>ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಝಾ</p></div>

ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಝಾ

   

ದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ಹಾಗೂ ಜಿಂಬಾಬ್ವೆ ನಡುವಿನ ಪಂದ್ಯವನ್ನು ದಕ್ಷಿಣ ಆಫ್ರಿಕಾ ತಂಡ ಗೆಲ್ಲುವ ಮೂಲಕ ಅಜೇಯವಾಗಿ ಸೆಮಿಫೈನಲ್ ತಲುಪಿದೆ.

ಜಿಂಬಾಬ್ವೆ ತಂಡವು ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ತೋರುತ್ತಾ ಬಂದಿದೆ. ಲೀಗ್‌ನಲ್ಲಿ ನಾಲ್ಕಕ್ಕೆ ನಾಲ್ಕೂ ಪಂದ್ಯಗಳನ್ನು ಗೆದ್ದು ಸೂಪರ್–8ರ ಹಂತ ತಲುಪಿತ್ತು. ಆದರೆ, ಸೂಪರ್‌–8ರಲ್ಲಿ ಮೂರಕ್ಕೆ ಮೂರು ಪಂದ್ಯ ಸೋತು ಟೂರ್ನಿಯಿಂದ ನಿರ್ಗಮಿಸಿದೆ.

ADVERTISEMENT

ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಲ್‌ರೌಂಡ್ ಆಟದ ಮೂಲಕ ಮಿಂಚಿದ ಜಿಂಬಾಬ್ವೆ ನಾಯಕ ಸಿಕಂದರ್ ರಝಾ ಅವರು ತಂಡದ ಸೋಲಿನ ನಡುವೆಯೂ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

50+ ರನ್ 3 ವಿಕೆಟ್

ಜಿಂಬಾಬ್ವೆ ತಂಡದ ನಾಯಕ ಸಿಕಂದರ್ ರಝಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಮಿಂಚಿದರು. ಅವರು ಬ್ಯಾಟಿಂಗ್‌ನಲ್ಲಿ 73 ರನ್‌ ಹಾಗೂ ಬೌಲಿಂಗ್‌ನಲ್ಲಿ ಕೇವಲ 29 ರನ್‌ಗಳಿಗೆ 3 ವಿಕೆಟ್ ಪಡೆದುಕೊಂಡರು. ಆ ಮೂಲಕ ಟಿ20 ವಿಶ್ವಕಪ್‌ನ ಪಂದ್ಯವೊಂದರಲ್ಲಿ ಮೂರು ವಿಕೆಟ್ ಹಾಗೂ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಮಾಡಿದರು.

ಇದಕ್ಕೂ ಮೊದಲು ಈ ದಾಖಲೆ 72 ರನ್ ಹಾಗೂ 26 ರನ್‌ಗಳಿಗೆ 3 ವಿಕೆಟ್ ಪಡೆದಿದ್ದ ಶೇನ್ ವಾಟ್ಸನ್‌ ಹೆಸರಿನಲ್ಲಿತ್ತು.

ಟಿ20 ವಿಶ್ವಕಪ್‌ನಲ್ಲಿ 3 ಅಥವಾ ಹೆಚ್ಚು ವಿಕೆಟ್ ಹಾಗೂ ಅಧಿಕ ರನ್

  • ಸಿಕಂದರ್ ರಜಾ 72 ರನ್ ಮತ್ತು 3/29

  • ಶೇನ್ ವಾಟ್ಸನ್ 72 ರನ್ ಮತ್ತು 3/34

  • ಮಾರ್ಕಸ್ ಸ್ಟೋಯಿನಸ್ 67 ರನ್ ಮತ್ತು 3/19

  • ಡ್ವೇನ್ ಬ್ರಾವೊ ಅಜೇಯ 66 ರನ್ ಮತ್ತು 4/38

  • ರೋಸ್ಟನ್ ಚೇಸ್ 52 ರನ್ ಮತ್ತು 3/12

ಸಂಕ್ಷಿಪ್ತ ಸ್ಕೋರ್‌: ಜಿಂಬಾಬ್ವೆ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 153 (ಸಿಕಂದರ್‌ ರಝಾ 73,  ಕ್ಲೈವ್ ಮದಾಂದೆ ಔಟಾಗದೇ 26; ಕ್ವೇನಾ ಮಫಾಕ 21ಕ್ಕೆ 2, ಕಾರ್ಬಿನ್‌ ಬಾಷ್‌ 40ಕ್ಕೆ 2). ದಕ್ಷಿಣ ಆಫ್ರಿಕಾ: 17.5 ಓವರ್‌ಗಳಲ್ಲಿ 5 ವಿಕೆಟ್‌ಗೆ 154 (ರಿಯಾನ್‌ ರಿಕೆಲ್ಟನ್‌ 31, ಡೆವಾಲ್ಡ್‌ ಬ್ರೆವಿಸ್‌ 42, ಜಾರ್ಜ್‌ ಲಿಂಡೆ ಔಟಾಗದೇ 30; ಸಿಕಂದರ್‌ ರಝಾ 29ಕ್ಕೆ 3). ಪಂದ್ಯದ ಆಟಗಾರ: ಸಿಕಂದರ್‌ ರಝಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.