ADVERTISEMENT

Smriti Mandhana | ಮೂರೂ ಮಾದರಿಯಲ್ಲಿ ಶತಕ; ದಾಖಲೆ ಬರೆದ ಸ್ಮೃತಿ ಮಂದಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜೂನ್ 2025, 6:46 IST
Last Updated 29 ಜೂನ್ 2025, 6:46 IST
<div class="paragraphs"><p>ಶತಕ ಸಿಡಿಸಿ ಸಂಭ್ರಮಿಸಿದ&nbsp;ಸ್ಮೃತಿ ಮಂದಾನ</p></div>

ಶತಕ ಸಿಡಿಸಿ ಸಂಭ್ರಮಿಸಿದ ಸ್ಮೃತಿ ಮಂದಾನ

   

ರಾಯಿಟರ್ಸ್ ಚಿತ್ರ

ನಾಟಿಂಗ್‌ಹ್ಯಾಮ್: ಆತಿಥೇಯ ಇಂಗ್ಲೆಂಡ್‌ ವಿರುದ್ಧದ ಟಿ20 ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ಸ್ಮೃತಿ ಮಂದಾನ, ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಶತಕ ಬಾರಿಸಿದ ಭಾರತದ ಏಕೈಕ ಹಾಗೂ ವಿಶ್ವದ 5ನೇ ಬ್ಯಾಟರ್‌ ಎಂಬ ಸಾಧನೆ ಮಾಡಿದ್ದಾರೆ.

ADVERTISEMENT

ನಾಟಿಂಗ್‌ಹ್ಯಾಮ್ ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಮಂದಾನ ಸಿಡಿಸಿದ ಶತಕದ ಬಲದಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 210 ರನ್‌ ಕಲೆಹಾಕಿತ್ತು. 62 ಎಸೆತಗಳನ್ನು ಎದುರಿಸಿದ ಮಂದಾನ, 3 ಸಿಕ್ಸ್‌ ಹಾಗೂ 15 ಬೌಂಡರಿ ಸಹಿತ 112 ರನ್‌ ಬಾರಿಸಿದರು.

ಕಠಿಣ ಗುರಿ ಬೆನ್ನತ್ತಿದ ಆಂಗ್ಲರ ಪಡೆ, 14.5 ಓವರ್‌ಗಳಲ್ಲಿ 113 ರನ್‌ ಗಳಿಸಿ ಸರ್ವಪತನ ಕಂಡಿತು. 97 ರನ್‌ ಅಂತರದ ಬೃಹತ್‌ ಗೆಲುವು ದಾಖಲಿಸಿದ ಭಾರತ, ಐದು ಪಂದ್ಯಗಳ ಸರಣಿಯಲ್ಲಿ 0–1 ಅಂತರದಲ್ಲಿ ಮುನ್ನಡೆ ಸಾಧಿಸಿದೆ.

ದಾಖಲೆಯ ಶತಕ
ಟಿ20 ಕ್ರಿಕೆಟ್‌ನಲ್ಲಿ ಮಂದಾನಗೆ ಇದು ಮೊದಲ ಶತಕವಾಗಿದೆ. ಇದರೊಂದಿಗೆ ಈ ಮಾದರಿಯಲ್ಲಿ ಭಾರತದ ಪರ ಮೂರಂಕಿ ಗಡಿ ದಾಟಿದ ಎರಡನೇ ಆಟಗಾರ್ತಿ ಎನಿಸಿದ್ದಾರೆ.

ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಅವರು 2018ರಲ್ಲಿ ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.

ಇದಷ್ಟೇ ಅಲ್ಲ. ಮಂದಾನ ಅವರು ಮೂರೂ ಮಾದರಿಯಲ್ಲಿ ಶತಕ ಗಳಿಸಿದ ಬ್ಯಾಟರ್‌ಗಳ ಸಾಲಿಗೆ ಸೇರಿಕೊಂಡಿದ್ದಾರೆ.

ಇಂಗ್ಲೆಂಡ್‌ನ ಹೀದರ್‌ ನೈಟ್‌ ಹಾಗೂ ಟಾಮಿ ಬ್ಯೂಮಂಟ್‌, ದಕ್ಷಿಣ ಆಫ್ರಿಕಾದ ಲೌರಾ ವೋಲ್ವಾರ್ಡ್ತ್‌, ಆಸ್ಟ್ರೇಲಿಯಾದ ಬೆತ್‌ ಮೂನಿ ಅವರಷ್ಟೇ ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.