ADVERTISEMENT

IND vs SA 2nd T20 | ಆಟದ ವೇಳೆ ಮೈದಾನಕ್ಕೆ ಬಂದ ಹಾವು 

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2022, 16:42 IST
Last Updated 2 ಅಕ್ಟೋಬರ್ 2022, 16:42 IST
ಪಂದ್ಯದ ವೇಳೆ ಮೈದಾನಕ್ಕೆ ಬಂದಿದ್ದ ಹಾವು
ಪಂದ್ಯದ ವೇಳೆ ಮೈದಾನಕ್ಕೆ ಬಂದಿದ್ದ ಹಾವು   

ಗುವಾಹಟಿ (ಅಸ್ಸಾಂ): ಗುವಾಹಟಿಯಲ್ಲಿ ನಡೆಯುತ್ತಿರುವ ಭಾರತ-ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟಿ20 ಪಂದ್ಯದ ವೇಳೆ ಮೈದಾನಕ್ಕೆ ಹಾವು ಪ್ರವೇಶಿಸಿದ್ದು, ಕೆಲ ಕಾಲ ಆಟವನ್ನು ನಿಲ್ಲಿಸಲಾಗಿತ್ತು.

ಟಾಸ್‌ ಸೋತರೂ ಭಾರತಕ್ಕೆ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದುಕೊಂಡಿತು. ಪಂದ್ಯದ ಏಳನೇ ಓವರ್‌ನ ನಂತರ ಹಾವು ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದೆ. ಕ್ರೀಡಾಂಗಣದ ಸಿಬ್ಬಂದಿ ಮೈದಾನಕ್ಕಿಳಿದು ಹಾವನ್ನು ಅಲ್ಲಿಂದ ದೂರಕ್ಕೆ ಅಟ್ಟಿದರು. ನಂತರ ಆಟವು ಪುನರಾರಂಭವಾಯಿತು.

ಕ್ರಿಕೆಟ್ ಪಂದ್ಯವನ್ನು ಹಾವೊಂದು ನಿಲ್ಲಿಸಿದ್ದನ್ನು ನೋಡಿರಲಿಲ್ಲ ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.