ADVERTISEMENT

ತಾಹಿರ್‌ಗೆ ಭಾವನಾತ್ಮಕ ಕ್ಷಣ

ಏಜೆನ್ಸೀಸ್
Published 5 ಜುಲೈ 2019, 20:01 IST
Last Updated 5 ಜುಲೈ 2019, 20:01 IST
ಇಮ್ರಾನ್‌ ತಾಹಿರ್‌
ಇಮ್ರಾನ್‌ ತಾಹಿರ್‌   

ಮ್ಯಾಂಚೆಸ್ಟರ್‌: ದಕ್ಷಿಣ ಆಫ್ರಿಕಾ ತಂಡದ ‘ಹಿರಿಯಣ್ಣ’ ಇಮ್ರಾನ್‌ ತಾಹಿರ್‌ ಏಕದಿನ ಅಂತರರಾಷ್ಟ್ರೀಯಕ್ರಿಕೆಟ್‌ನಿಂದ ಭಾವನಾತ್ಮಕ ವಿದಾಯಕ್ಕೆ ಸಜ್ಜಾಗಿದ್ದಾರೆ. ಆದರೆ ದಕ್ಷಿಣ ಆಫ್ರಿಕಾ ತಂಡದ ಭವಿಷ್ಯದ ಬಗ್ಗೆಈ ಅನುಭವಿ ಲೆಗ್‌ಬ್ರೇಕ್‌ ಬೌಲರ್‌ ಆಶಾವಾದಿಯಾಗಿದ್ದಾರೆ.‌

ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ವಿರುದ್ಧ ಶನಿವಾರ ನಡೆಯುವ ವಿಶ್ವಕಪ್‌ ಪಂದ್ಯ ತಾಹಿರ್‌ ಪಾಲಿಗೆ 107ನೇ ಮತ್ತು ಅಂತಿಮ ಏಕದಿನ ಪಂದ್ಯವಾಗಲಿದೆ. ನಂತರ 40 ವರ್ಷ ವಯಸ್ಸಿನ ಈ ಬೌಲರ್‌ 50 ಓವರುಗಳ ಮಾದರಿಯಿಂದ ನಿವೃತ್ತಿ ಪಡೆಯಲಿದ್ದಾರೆ.

ಪಾಕಿಸ್ತಾನದ ಲಾಹೋರ್‌ನಲ್ಲಿ ಜನಿಸಿದರೂ, ಅವರು ಮದುವೆ ಯಾಗಿದ್ದು ದಕ್ಷಿಣ ಆಫ್ರಿಕಾದ ಕನ್ಯೆಯನ್ನು. 2011ರ ಫೆಬ್ರುವರಿಯಲ್ಲಿ ನಡೆದ ವಿಶ್ವಕಪ್‌ ಸಂದರ್ಭದಲ್ಲಿ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.