ADVERTISEMENT

ಹಾಕಿ ಆಟಗಾರ ಶ್ರೀಜೇಶ್‌ಗೆ ಕೋವಿಡ್ ಲಸಿಕೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2021, 3:04 IST
Last Updated 30 ಏಪ್ರಿಲ್ 2021, 3:04 IST
ಪಿ. ಆರ್. ಶ್ರೀಜೇಶ್
ಪಿ. ಆರ್. ಶ್ರೀಜೇಶ್   

ಬೆಂಗಳೂರು/ನವದೆಹಲಿ:ಭಾರತ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್ ಶ್ರೀಜೇಶ್ ಗುರುವಾರ ಕೋವಿಡ್ –19 ಲಸಿಕೆಯ ಮೊದಲ ಡೋಸ್ ಪಡೆದರು.

‘ನಾನು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದೆ‘ ಎಂದು ಶ್ರೀಜೇಶ್ ಟ್ವೀಟ್ ಮಾಡಿದ್ದಾರೆ. ಅವರು ಕೋವಿಶೀಲ್ಡ್‌ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ ಹೋಗುವ ಸಿದ್ಧತೆಯಲ್ಲಿರುವ ಹಾಕಿ ತಂಡವು ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದಲ್ಲಿ ಅಭ್ಯಾಸ ನಡೆಸುತ್ತಿದೆ.

ADVERTISEMENT

ತಂಡವು ಈಚೆಗಷ್ಟೇ ಯುರೋಪ್ ಮತ್ತು ಅರ್ಜೆಂಟೀನಾ ಪ್ರವಾಸಗಳಿಗೆ ತೆರಳಿತ್ತು. ಪ್ರೊ ಲೀಗ್ ಪಂದ್ಯಗಳಲ್ಲಿ ಆಡಿತ್ತು. ಹೋದ ಭಾನುವಾರ ಸಾಯ್‌ನಲ್ಲಿ ಆರಂಭವಾದ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ತಂಡವು ಮರಳಿತ್ತು.

ಇಲ್ಲಿಯೇ ಇರುವ ಭಾರತ ಮಹಿಳಾ ತಂಡದ ಏಳು ಆಟಗಾರ್ತಿಯರಿಗೆ ಈಚೆಗಷ್ಟೇ ಕೋವಿಡ್ ಇರುವುದು ಖಚಿತವಾಗಿತ್ತು. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ತಂಡದ ನಾಯಕಿ ರಾಣಿ ರಾಂಪಾಲ್ ಕೂಡ ಅದರಲ್ಲಿದ್ದಾರೆ.

ಅವರೊಂದಿಗೆ ವಿಡಿಯೊ ವಿಶ್ಲೇಷಕ ಅಮೃತಪ್ರಕಾಶ್ ಮತ್ತು ಸೈಂಟಿಫಿಕ್ ಸಲಹೆಗಾರ ವೇಯ್ನ್ ಲೊಂಬಾರ್ಡ್‌ ಅವರಿಗೂ ಸೋಂಕು ತಗುಲಿರುವುದು ಖಚಿತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.