ADVERTISEMENT

ಸೂರ್ಯಕುಮಾರ್‌ಗೆ ಉಜ್ವಲ ಭವಿಷ್ಯವಿದೆ: ಎಬಿ ಡಿವಿಲಿಯರ್ಸ್‌

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 6:56 IST
Last Updated 9 ನವೆಂಬರ್ 2022, 6:56 IST
ಎಬಿ ಡಿವಿಲಿಯರ್ಸ್
ಎಬಿ ಡಿವಿಲಿಯರ್ಸ್   

ನವದೆಹಲಿ: ‘ಸೂರ್ಯಕುಮಾರ್ ಯಾದವ್ ಅವರಿಗೆ ಉಜ್ವಲ ಭವಿಷ್ಯವಿದೆ. ಅವರು ಈಗ ಅದ್ಭುತವಾದ ಬ್ಯಾಟಿಂಗ್ ಮಾಡುತ್ತಿದ್ದಾರೆ’–

‘ಮಿಸ್ಟರ್ 360 ಡಿಗ್ರಿ’ ಎಂದೇ ಖ್ಯಾತರಾದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರು ಮಾತುಗಳಿವು.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಅವರು ಮಿಂಚುತ್ತಿದ್ದಾರೆ. ಅವರ ಬ್ಯಾಟಿಂಗ್ ಶೈಲಿಯನ್ನು ಎಬಿಡಿಯವರಿಗೆ ಹೋಲಿಕೆ ಮಾಡಲಾಗುತ್ತಿದೆ. ‘ಭಾರತದ ಮಿಸ್ಟರ್ 360 ಡಿಗ್ರಿ ಬ್ಯಾಟರ್’ ಎಂದು ಸುನಿಲ್ ಗಾವಸ್ಕರ್ ಅವರೇ ಶ್ಲಾಘಿಸಿದ್ದಾರೆ.

ಸದ್ಯ ಭಾರತ ಪ್ರವಾಸದಲ್ಲಿರುವ ಎಬಿಡಿ, ‘ಈ ಮೊದಲು ಅವರು ಸಾಂಪ್ರದಾಯಿಕ ಶೈಲಿಯಲ್ಲಿ ಆಡುವುದನ್ನು ನೋಡಿದ್ದೇನೆ. ಈಗ ಅವರು ಕ್ರೀಸ್‌ಗೆ ಕಾಲಿಟ್ಟ ಆರಂಭದಲ್ಲಿ ಸೆಟ್ ಆಗುತ್ತಾರೆ. ನಂತರ ಬೌಲರ್‌ಗಳ ಮೇಲೆ ಸವಾರಿ ಮಾಡುತ್ತಾರೆ. ಅವರ ಶೈಲಿಯು ಮನಮೋಹಕವಾಗಿದೆ. ಅವರ ಆಟವನ್ನು ನೋಡುವುದೇ ಆನಂದ. ಅವರಿಗೆ ಉಜ್ವಲವಾದ ಭವಿಷ್ಯವಿದೆ’ ಎಂದರು.

ಮುಂಬೈನ ಬ್ಯಾಟರ್ ಸೂರ್ಯ ಐದು ಪಂದ್ಯಗಳಿಂದ 225 ರನ್‌ಗಳನ್ನು ಗಳಿಸಿದ್ದಾರೆ. ಅದರಲ್ಲಿ ಮೂರು ಅರ್ಧಶತಕಗಲಿವೆ. 193.97ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.