ADVERTISEMENT

ಸತತ 2ನೇ ಸಲ ಐಸಿಸಿ ವರ್ಷದ T20I ಕ್ರಿಕೆಟಿಗ ಪ್ರಶಸ್ತಿಗೆ ಸೂರ್ಯಕುಮಾರ್ ಆಯ್ಕೆ

ಪಿಟಿಐ
Published 24 ಜನವರಿ 2024, 10:28 IST
Last Updated 24 ಜನವರಿ 2024, 10:28 IST
<div class="paragraphs"><p>ಸೂರ್ಯಕುಮಾರ್ ಯಾದವ್</p></div>

ಸೂರ್ಯಕುಮಾರ್ ಯಾದವ್

   

(ಚಿತ್ರ ಕೃಪೆ: ಐಸಿಸಿ) 

ದುಬೈ: ಚುಟುಕು ಕ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿರುವ ಭಾರತದ ಬ್ಯಾಟರ್ ಸೂರ್ಯಕುಮಾರ್ ಯಾದವ್, ಸತತ ಎರಡನೇ ಬಾರಿಗೆ 'ಐಸಿಸಿ ವರ್ಷದ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟಿಗ ಪ್ರಶಸ್ತಿ'ಗೆ ಆಯ್ಕೆಯಾಗಿದ್ದಾರೆ.

ADVERTISEMENT

2023ನೇ ಸಾಲಿನಲ್ಲಿ 150ರ ಸ್ಟ್ರೈಕ್‌ರೇಟ್‌ನಲ್ಲಿ 50ರ ಸರಾಸರಿಯ ಅಸುಪಾಸಿನಲ್ಲಿ ಸೂರ್ಯಕುಮಾರ್ 700ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಆಡಿ ಸೂರ್ಯಕುಮಾರ್ ಯಾದವ್ ಅನೇಕ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.

2023ನೇ ವರ್ಷದಲ್ಲಿ ಸೂರ್ಯಕುಮಾರ್ ಸಾಧನೆ:

ಇನಿಂಗ್ಸ್: 17

ರನ್: 733

ಸ್ಟ್ರೈಕ್‌ರೇಟ್‌: 155.95

ಸರಾಸರಿ: 48.86

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.