
ಸೂರ್ಯಕುಮಾರ್ ಯಾದವ್
ಅಹಮದಾಬಾದ್: ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿ ಅಂತಿಮ ಪಂದ್ಯದಲ್ಲಿ ಭಾರತ ತಂಡ ಗೆಲ್ಲುವ ಮೂಲಕ ಸರಣಿಯನ್ನು 3–1ರ ಅಂತರದಲ್ಲಿ ವಶಪಡಿಸಿಕೊಂಡಿತು. ಸರಣಿಯುದ್ದಕ್ಕೂ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿದ ನಾಯಕ ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು.
ಪಂದ್ಯದ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್, ‘ಬ್ಯಾಟರ್ ಸೂರ್ಯ’ ಕಾಣೆಯಾಗಿದ್ದಾನೆ. ಅವನು ಟಿ20 ವಿಶ್ವಕಪ್ ವೇಳೆಗ ಇನ್ನಷ್ಟು ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡುತ್ತಾನೆ’ ಎಂದು ವಿಶ್ವಾಸದ ನುಡಿಗಳನ್ನಾಡಿದರು.
ಟಿ20 ತಂಡದ ನಾಯನಾಗಿರುವ ಸೂರ್ಯಕುಮಾರ್ ಯಾದವ್ ಅವರು ಕಳೆದ 14 ತಿಂಗಳಿನಿಂದ ರನ್ ಗಳಿಸಲು ಪರದಾಡುತ್ತಿದ್ದಾರೆ. ಈ ನಡುವೆ ಅವರ ವಿರುದ್ಧ ವ್ಯಾಪಕ ಟೀಕೆಗಳು ಕೂಡ ಕೇಳಿ ಬರುತ್ತಿವೆ. ಸದ್ಯ, ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ಸರಣಿಯ 4 ಇನಿಂಗ್ಸ್‌ಗಳಿಂದ ಅವರು ಕೇವಲ 34 ರನ್ ಗಳಿಸಿದ್ದಾರೆ.
‘ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸವಾಲಿನದ್ದಾಗಿತ್ತು. ನಾವು ನಮ್ಮ ಕೈಲಾದಷ್ಟು ಉತ್ತಮ ಕ್ರಿಕೆಟ್ ಆಡಿದೆವು. ಒಂದೇ ವಿಷಯವೆಂದರೆ ಬ್ಯಾಟರ್ ಆಗಿ ಸೂರ್ಯ ನಮಗೆ ಕಾಣಲಿಲ್ಲ. ಅವನು ಎಲ್ಲೋ ಕಾಣೆಯಾಗಿದ್ದಾನೆ ಎಂದು ನಾನು ಭಾವಿಸುತ್ತೇನೆ. ಆದರೆ, ಖಂಡಿತವಾಗಿಯು ಅವನು ಬಲವಾಗಿ ಹಿಂತಿರುಗುತ್ತಾನೆ. ಒಬ್ಬ ನಾಯಕನಾಗಿ ಸರಣಿ ಗೆಲುವಿನ ಬಗ್ಗೆ ಹಾಗೂ ಆಟಗಾರರ ಪ್ರದರ್ಶನದ ಬಗ್ಗೆ ಸಂತೋಷವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.