
ಸೂರ್ಯಕುಮಾರ್ ಯಾದವ್
(ಪಿಟಿಐ ಚಿತ್ರ)
ಅಹಮದಾಬಾದ್: ಭಾನುವಾರ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಟಿ20 ವಿಶ್ವಕಪ್‌ನ ಸೂಪರ್–8ರ ಪಂದ್ಯದಲ್ಲಿ ಭಾರತ ತಂಡವು 76 ರನ್‌ಗಳ ಹೀನಾಯ ಸೋಲು ಅನುಭವಿಸಿದೆ. ಪಂದ್ಯದ ಬಳಿಕ ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್ ಸೋಲಿಗೆ ಕಾರಣ ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ.
188 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಬ್ಯಾಟರ್‌ಗಳು ಬಂದಷ್ಟೇ ವೇಗವಾಗಿ ಪವಿಲಿಯನ್ ಸೇರಿಕೊಂಡರು. ಯಾವುದೇ ಹಂತದಲ್ಲೂ ಬ್ಯಾಟರ್‌ಗಳು ಪ್ರತಿರೋಧ ತೋರಲಿಲ್ಲ. ಪರಿಣಾಮ 18.5 ಓವರ್‌ಗಳಲ್ಲಿ 111 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ತನ್ನ ಅತೀ ದೊಡ್ಡ ಅಂತರದ ಸೋಲಿಗೆ ಒಳಗಾಯಿತು.
ಈ ಕುರಿತು ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್ ‘ಕೆಲವೊಮ್ಮೆ ಪವರ್‌ಪ್ಲೇನಲ್ಲಿ ಪಂದ್ಯ ಗೆಲ್ಲಲು ಸಾಧ್ಯವಿಲ್ಲ ಎಂದುಕೊಳ್ಳಬಹುದು. ಆದರೆ, ನೀವು ಸೋಲುವುದಿಲ್ಲ ಎಂದು ಹೇಳಲಾಗದು’ ಎಂದರು.
ಉತ್ತಮ ಜೊತೆಯಾಟ ಬೇಕಿತ್ತು
‘188 ರನ್‌ಗಳ ಬೃಹತ್ ಗುರಿ ಬೆನ್ನಟ್ಟುವಾಗ ನಮಗೆ ಉತ್ತಮ ಜೊತೆಯಾಟದ ಅಗತ್ಯವಿತ್ತು. ಆದರೆ, ನಮಗೆ ಅದು ಸಿಗಲಿಲ್ಲ. ನಾವು ಉತ್ತಮವಾಗಿ ಬ್ಯಾಟಿಂಗ್ ಮಾಡಬಹುದಿತ್ತು. ಅದು ಸಾಧ್ಯವಾಗದಿರುವುದೇ ನಮ್ಮ ಸೋಲಿಗೆ ಪ್ರಮುಖ ಕಾರಣ ಎಂದರು.
ಭಾರತವು ಪವರ್ ಪ್ಲೇನಲ್ಲಿ ಪ್ರಮುಖ ಬ್ಯಾಟರ್‌ಗಳಾದ ಇಶಾನ್ ಕಿಶನ್ (0), ಅಭಿಷೇಕ್ ಶರ್ಮಾ (15) ಮತ್ತು ತಿಲಕ್ ವರ್ಮಾ (1) ಅವರ ವಿಕೆಟ್ ಕಳದುಕೊಂಡಿತು.
ನಮ್ಮ ಬೌಲರ್‌ಗಳು ಆರಂಭದಲ್ಲಿ ಉತ್ತಮ ಬೌಲಿಂಗ್ ಮಾಡಿದರು. ಮಾತ್ರವಲ್ಲ, 15 ಓವರ್ ವೇಳೆಗೆ ದಕ್ಷಿಣ ಆಫ್ರಿಕಾ 200ಕ್ಕೂ ಅಧಿಕ ರನ್ ಗಳಿಸುವ ಸಾಧ್ಯತೆ ಇತ್ತು. ಆದರೆ, ಕೊನೆಯಲ್ಲಿ ನಮ್ಮ ಬೌಲರ್‌ಗಳು ಮೇಲುಗೈ ಸಾಧಿಸಿ 188ಕ್ಕೆ ಕಟ್ಟಿಹಾಕಿದರ. ಆದರೆ, 7ರಿಂದ 15 ಓವರ್‌ಗಳು ನಮ್ಮದಾಗಿರಲಿಲ್ಲ ಎಂದರು.
ಬೃಹತ್ ಅಂತರದ ಸೋಲಿನೊಂದಿಗೆ ಭಾರತದ ರನ್ ರೇಟ್ (-3.800) ಕುಸಿದಿರುವುದರಿಂದಾಗಿ ಸೂಪರ್–8ರಲ್ಲಿ ಮುಂದಿನ ಎರಡು ಪಂದ್ಯಗಳು ಟೀಂ ಇಂಡಿಯಾಗೆ ಅನಿವಾರ್ಯ ಎನಿಸಿವೆ.
‘ಸೋಲು ಗೆಲುವು ಆಟದ ಒಂದು ಭಾಗ. ನಾವು ಅದರಿಂದ ಕಲಿಯುತ್ತೇವೆ, ಸೋಲಿನಿಂದ ಮರಳಿ ಬರುತ್ತೇವೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಲು ಶ್ರಮಿಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.