
ಪುಣೆ: ನಾಯಕ ಇಶಾನ್ ಕಿಶನ್ ಅವರ ಶತಕ ಹಾಗೂ ಕುಮಾರ್ ಕುಶಾಗ್ರ ಅವರ ಬಿರುಸಿನ ಅರ್ಧಶತಕದ ನೆರವಿನಿಂದ ಜಾರ್ಖಂಡ್ ತಂಡವು 69 ರನ್‌ಗಳಿಂದ ಹರಿಯಾಣ ತಂಡವನ್ನು ಮಣಿಸಿತು. ಅದರೊಂದಿಗೆ, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಚೊಚ್ಚಲ ಬಾರಿಗೆ ಜಯಿಸಿತು.
ಟೂರ್ನಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದ್ದ ಜಾರ್ಖಂಡ್ ತಂಡವು ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಫೈನಲ್ ಪಂದ್ಯದಲ್ಲಿಯೂ ಸಂಪೂರ್ಣ ಮೇಲುಗೈ ಸಾಧಿಸಿತು.
ಕಿಶನ್ (101; 49 ಎ, 4x6, 6x10) ಶತಕ ಗಳಿಸಿದರೆ, ಕುಮಾರ್ (81; 38ಎ, 4x8, 6x5) ಬಿರುಸಿನ ಅರ್ಧಶತಕ ಗಳಿಸಿದರು. ಅದರಿಂದ ಜಾರ್ಖಂಡ್ ನಿಗದಿತ ಓವರ್‌ಗಳಲ್ಲಿ 3 ವಿಕೆಟ್‌ಗೆ 262 ರನ್ ಗಳಿಸಿತು.
ದೊಡ್ಡ ಗುರಿ ಬೆನ್ನಟ್ಟಿದ ಹರಿಯಾಣ, ಒತ್ತಡಕ್ಕೆ ಸಿಲುಕಿ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಸುಶಾಂತ್ ಮಿಶ್ರಾ (27ಕ್ಕೆ3) ಹಾಗೂ ಬಾಲಕೃಷ್ಣ (38ಕ್ಕೆ3) ಪರಿಣಾಮಕಾರಿ ಬೌಲಿಂಗ್ ಎದುರು 18.3 ಓವರ್‌ಗಳಲ್ಲಿ 193 ರನ್‌ಗಳಿಗೆ ಕುಸಿಯಿತು. ಯಶವರ್ಧನ್ ದಲಾಲ್ (53; 22ಎ) ಹಾಗೂ ಸಮಂತ್ ಜಾಖಡ್ (38; 17ಎ) ಹೋರಾಟ ತೋರಿದರು.
ಸಂಕ್ಷಿಪ್ತ ಸ್ಕೋರು: ಜಾರ್ಖಂಡ್: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 262(ಇಶಾನ್ ಕಿಶನ್ 101, ಕುಮಾರ್ ಕುಶಾಗ್ರ 81, ಅನುಕುಲ್ ರಾಯ್ ಔಟಾಗದೇ 40). ಹರಿಯಾಣ: 18.3 ಓವ್‌ಗಳಲ್ಲಿ 193 (ಯಶವರ್ಧನ್ ದಲಾಲ್ 53, ಸಮಂತ್ ಜಾಖಡ್ 38; ಸುಶಾಂತ್ ಮಿಶ್ರಾ 27ಕ್ಕೆ3, ಬಾಲಕೃಷ್ಣ 38ಕ್ಕೆ3).
ಪಂದ್ಯದ ಆಟಗಾರ: ಇಶಾನ್ ಕಿಶನ್.
ಸರಣಿಯ ಆಟಗಾರ: ಅನುಕುಲ್ ರಾಯ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.