
ಧ್ರುವ ಜುರೇಲ್, ಸರ್ಫರಾಜ್ ಖಾನ್
ಅಂಬಿ (ಪುಣೆ): ಜಾರ್ಖಂಡ್ ತಂಡದವರು ಮಂಗಳವಾರ ನಡೆದ ಪಂದ್ಯದಲ್ಲಿ 9 ರನ್‌ಗಳಿಂದ ಆಂಧ್ರ ತಂಡಕ್ಕೆ ಸೋತರೂ, ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಕ್ರಿಕೆಟ್ ಟೂರ್ನಿಯ ಸೂಪರ್ ಲೀಗ್ ಬಿ ಗುಂಪಿನಲ್ಲಿ ಅಗ್ರಸ್ಥಾನದೊಡನೆ ಫೈನಲ್ ತಲುಪಿತು. ಜಾರ್ಖಂಡ್ ತಂಡ ಗುರುವಾರ ನಡೆಯುವ ಫೈನಲ್‌ನಲ್ಲಿ ಹರಿಯಾಣ ತಂಡವನ್ನು ಎದುರಿಸಲಿದೆ.
ಬ್ಯಾಟಿಂಗ್ ಮಾಡಲು ಕಳಿಸಲ್ಪಟ್ಟ ಆಂಧ್ರ 7 ವಿಕೆಟ್‌ಗೆ 203 ರನ್ ಗಳಿಸಿತು. ನಂತರ ಜಾರ್ಖಂಡ್ ಹೋರಾಟ ತೋರಿದರೂ 8 ವಿಕೆಟ್‌ಗೆ 194 ರನ್ ಗಳಿಸಲಷ್ಟೇ ಶಕ್ತವಾಯಿತು. 8 ಅಂಕ ಪಡೆದ ಜಾರ್ಖಂಡ್ +0.221 ನಿವ್ವಳ ರನ್ ದರದೊಡನೆ ಅಗ್ರಸ್ಥಾನ ಪಡೆಯಿತು. ಇಷ್ಟೇ ಅಂಕ ಪಡೆದ ಆಂಧ್ರದ ರನ್ ದರ –0.113 ಕಡಿಮೆಯಾಗಿತ್ತು.
ಫೈನಲ್‌ಗೆ ಹರಿಯಾಣ:
ತಂಡ ‘ಎ’ ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಹೈದರಾಬಾದ್ ಮೇಲೆ 124 ರನ್‌ಗಳ ಸುಲಭ ಗೆಲುವು ಸಾಧಿಸಿತು. ‘ಎ’ ಗುಂಪಿನಲ್ಲಿ ಹರಿಯಾಣ, ಹೈದರಾಬಾದ್ ಮತ್ತು ಮುಂಬೈ ತಂಡಗಳು ತಲಾ ಎಂಟು ಅಂಕ ಪಡೆದವು. ಆದರೆ ನೆಟ್ ರನ್ ರೇಟ್ ಆಧಾರದಲ್ಲಿ ಹರಿಯಾಣ ಫೈನಲ್ ತಲುಪಿತು.
ಸಂಕ್ಷಿಪ್ತ ಸ್ಕೋರು:
20 ಓವರುಗಳಲ್ಲಿ 7ಕ್ಕೆ 203 (ಶ್ರೀಕರ್ ಭರತ್ 35, ನಿತೀಶ್ ಕುಮಾರ್ ರೆಡ್ಡಿ 45; ರಾಜನ್‌ದೀಪ್ ಸಿಂಗ್ 35ಕ್ಕೆ2); ಜಾರ್ಖಂಡ್: 20 ಓವರುಗಳಲ್ಲಿ 8ಕ್ಕೆ 194 (ಇಶಾನ್ ಕಿಶನ್ 35, ವಿರಾಟ್ ಸಿಂಗ್ 77, ನಿತೀಶ್ ಕುಮಾರ್ ರೆಡ್ಡಿ 32ಕ್ಕೆ2, ಸೌರಭ್ ಕುಮಾರ್ 21ಕ್ಕೆ2).
ಹರಿಯಾಣ: 20 ಓವರುಗಳಲ್ಲಿ 7ಕ್ಕೆ 246 (ಅಂಕಿತ್ ಕುಮಾರ್ 57, ಸಮಂತ್ ಜಾಖಡ್ 60, ಪಾರ್ಥ್ ವ್ಯಾಸ್ 45; ತನಯ್ ತ್ಯಾಗರಾಜನ್ 43ಕ್ಕೆ2); ಹೈದರಾಬಾದ್: 16.1 ಓವರುಗಳಲ್ಲಿ 122 (ರಾಹುಲ್ ಬುದ್ಧಿ 37; ಅನ್ಶುಲ್ ಕಾಂಬೋಜ್ 16ಕ್ಕೆ2, ಅಮಿತ್ ರಾಣಾ 14ಕ್ಕೆ3, ಸಮಂತ್ ಜಾಖಡ್ 16ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.