ADVERTISEMENT

Video| 10 ಸಿಕ್ಸರ್, 12 ಬೌಂಡರಿ ಸಹಿತ ಸ್ಫೋಟಕ ಶತಕ: ಸಿಎಸ್‌ಕೆ ಬ್ಯಾಟರ್ ದಾಖಲೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ನವೆಂಬರ್ 2025, 7:21 IST
Last Updated 27 ನವೆಂಬರ್ 2025, 7:21 IST
<div class="paragraphs"><p>ಉರ್ವಿಲ್ ಪಟೇಲ್</p></div>

ಉರ್ವಿಲ್ ಪಟೇಲ್

   

ಚಿತ್ರ: @SergioCSKK

ಹೈದರಾಬಾದ್: ಇಲ್ಲಿನ ಜಿಮ್‌ಖಾನಾ ಮೈದಾನದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಗುಜರಾತ್ ಹಾಗೂ ಸರ್ವಿಸಸ್ ನಡುವಿನ ಪಂದ್ಯದಲ್ಲಿ ಗುಜರಾತ್ ತಂಡದ ಆರಂಭಿಕ ಬ್ಯಾಟರ್ ಹಾಗೂ ನಾಯಕ ಉರ್ವಿಲ್ ಪಟೇಲ್ ಅವರು ಕೇವಲ 31 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.

ADVERTISEMENT

ಅಂತಿಮವಾಗಿ ಅವರು ಕೇವಲ 37 ಎಸೆತಗಳಲ್ಲಿ ಅಜೇಯ 119 ರನ್ ಗಳಿಸಿ ಗುಜರಾತ್ ತಂಡಕ್ಕೆ 8 ವಿಕೆಟ್‌ಗಳ ಸುಲಭ ಗೆಲುವು ತಂದುಕೊಟ್ಟರು. ಅವರ ಈ ಸ್ಫೋಟಕ ಇನಿಂಗ್ಸ್‌ನಲ್ಲಿ 10 ಸಿಕ್ಸರ್ ಹಾಗೂ 12 ಬೌಂಡರಿಗಳನ್ನು ಒಳಗೊಂಡಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ವಿಸಸ್ ತಂಡ 20 ಓವರ್‌ಗಳಲ್ಲಿ 182 ರನ್ ಗಳಿಸಿತ್ತು.

183 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ತಂಡದ ಪರ ಉರ್ವಿಲ್ ಪಟೇಲ್ (ಅಜೇಯ 119) ಹಾಗೂ ಆರ್ಯ ದೇಸಾಯಿ (60) ರನ್‌ಗಳ ನೆರವಿನಿಂದ ಕೇವಲ 12.3 ಓವರ್‌ಗಳಲ್ಲಿ ಇನ್ನೂ 45 ಎಸೆತಗಳು ಬಾಕಿ ಇರುವಂತೆ ಗೆಲುವು ದಾಖಲಿಸಿತು.

ಈ ಸ್ಫೋಟಕ ಶತಕದೊಂದಿಗೆ ಟಿ20 ಕ್ರಿಕೆಟ್ ಇತಿಹಾಸದಲ್ಲಿ 35 ಕ್ಕಿಂತ ಕಡಿಮೆ ಎಸೆತಗಳಲ್ಲಿ 2 ಶತಕ ಸಿಡಿಸಿದ ವಿಶ್ವದ ಏಕೈಕ ಆಟಗಾರ ಎಂಬ ಸಾಧನೆ ಮಾಡಿದರು. ಇದಕ್ಕೂ ಮುನ್ನ ಅವರು, 2024ರ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕೇವಲ 28 ಎಸೆತಗಳಲ್ಲಿ ಶತಕ ಸಿಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.