ADVERTISEMENT

T20 World Cup: ಡಚ್ಚರ ಗೆಲುವಿನಲ್ಲಿ ‘ಬಾಸ್‌’ ಮಿಂಚು; ಸೂಪರ್ 8 ಹಂತದ ಆಸೆ ಜೀವಂತ

ಪಿಟಿಐ
Published 10 ಫೆಬ್ರುವರಿ 2026, 13:44 IST
Last Updated 10 ಫೆಬ್ರುವರಿ 2026, 13:44 IST
<div class="paragraphs"><p>ಅರ್ಧ ಶತಕ ಗಳಿಸಿದ ಸಂಭ್ರಮದಲ್ಲಿ ಬಾಸ್‌ ಡಿ ಲೇಡೆ </p></div>

ಅರ್ಧ ಶತಕ ಗಳಿಸಿದ ಸಂಭ್ರಮದಲ್ಲಿ ಬಾಸ್‌ ಡಿ ಲೇಡೆ

   

ಪಿಟಿಐ ಚಿತ್ರ

ನವದೆಹಲಿ: ಬಾಸ್‌ ಡಿ ಲೀಡೆ (20ಕ್ಕೆ2 ಮತ್ತು ಔಟಾಗದೇ 72) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ನೆದರ್ಲೆಂಡ್ಸ್ ತಂಡವು ಟಿ20 ವಿಶ್ವಕಪ್ ‘ಎ’ ಗುಂಪಿನ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಸೋಲಿಸಿತು. ಆ ಮೂಲಕ ಸೂಪರ್ 8 ಹಂತಕ್ಕೇರುವ ಅವಕಾಶ ಜೀವಂತವಾಗಿ ಉಳಿಸಿತು.

ADVERTISEMENT

ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಮೇಲುಗೈ ಸಾಧಿಸಿ ಕೊನೆಗೆ ನಿರಾಶೆ ಅನುಭವಿಸಿದ ಡಚ್ಚರ ಪಡೆ ಇಲ್ಲಿ ಪ್ರಬುದ್ಧವಾಗಿ ಆಡಿತು. ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿ ನಮೀಬಿಯಾ ತಂಡವನ್ನು 8 ವಿಕೆಟ್‌ಗೆ 156 ರನ್‌ಗಳಿಗೆ ಸೀಮಿತಗೊಳಿಸಿತು. ಇನ್ನೂ 12 ಎಸೆತಗಳಿರುವಂತೆ 3 ವಿಕೆಟ್‌ ನಷ್ಟದಲ್ಲಿ 157 ರನ್ ಹೊಡೆಯಿತು.

ಇದು ವಿಶ್ವಕಪ್‌ನಲ್ಲಿ ನಮೀಬಿಯಾಕ್ಕೆ ಮೊದಲ ಪಂದ್ಯವಾಗಿದ್ದು, ಅಲ್ಲಲ್ಲಿ ಉತ್ತಮ ಆಟವಾಡಿತು. ದಕ್ಷಿಣ ಆಫ್ರಿಕಾ ವಿರುದ್ಧ 2025ರ ಅಕ್ಟೋಬರ್‌ನಲ್ಲಿ ಕೊನೆಯ ಸಲ ಈ ತಂಡ ಟಿ20 ಪಂದ್ಯ ಆಡಿದ್ದು, ಲಯ ಕಾಣಲು ಸಮಯ ತೆಗೆದುಕೊಂಡಿತು.

ಜಾನ್ ಫ್ರಿಲಿಂಕ್ (30) ಮತ್ತು ಯಾನ್ ನಿಕೊಲ್ ಲೋಫ್ಟಿ–ಏಟನ್ (42) ಅವರು ಎರಡನೇ ವಿಕೆಟ್‌ಗೆ 60 ರನ್ ಸೇರಿಸಿದ್ದು ಇನಿಂಗ್ಸ್‌ನಲ್ಲಿ ಉಲ್ಲೇಖನೀಯ ಅಂಶವೆನಿಸಿತು.

ಬಾಸ್ ಡಿ ಲೀಡೆ ಮತ್ತು ಕಾಲಿನ್ ಆ್ಯಕರಮನ್‌ (32, 28ಎ) ಮೂರನೇ ವಿಕೆಟ್‌ಗೆ 70 ರನ್ ಸೇರಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. ಲೀಡೆ 48 ಎಸೆತಗಳಲ್ಲಿ 5 ಬೌಂಡರಿ, ನಾಲ್ಕು ಸಿಕ್ಸರ್‌ಗಳಿದ್ದ 72 ರನ್ ಗಳಿಸಿ ಔಟಾಗದೇ ಉಳಿದರು. ನಾಯಕ ಸ್ಕಾಟ್ ಎಡ್ವರ್ಡ್ಸ್‌ 18 ರನ್ ಗಳಿಸಿ ಅಜೇಯರಾಗುಳಿದರು.

ಸಂಕ್ಷಿಪ್ತ ಸ್ಕೋರು:

ನಮೀಬಿಯಾ: 20 ಓವರುಗಳಲ್ಲಿ 8ಕ್ಕೆ 156 (ಜಾನ್‌ ಫ್ರಿಲಿಂಕ್ 30, ಯಾನ್ ನಿಕೊಲ್ ಲೋಫ್ಟಿ–ಏಟನ್ 42; ಲೋಗನ್ ವ್ಯಾನ್ ಬೀಕ್ 13ಕ್ಕೆ2, ಬಾಸ್ ಡಿ ಲೀಡೆ 13ಕ್ಕೆ2)

ನೆದರ್ಲೆಂಡ್ಸ್: 18 ಓವರುಗಳಲ್ಲಿ 3ಕ್ಕೆ 159 (ಮೈಕೆಲ್ ಲೆವಿಟ್ 28, ಬಾಸ್ ಡಿ ಲೀಡೆ ಔಟಾಗದೇ 72, ಕಾಲಿನ್ ಆ್ಯಕರ್ಮನ್ 32).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.