ADVERTISEMENT

ಟಿ20 ಕ್ರಿಕೆಟ್‌ನಲ್ಲಿ ಸುನಿಲ್ ನಾರಾಯಣ್ 600 ವಿಕೆಟ್ ಸಾಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಡಿಸೆಂಬರ್ 2025, 11:05 IST
Last Updated 4 ಡಿಸೆಂಬರ್ 2025, 11:05 IST
<div class="paragraphs"><p>ಸುನಿಲ್ ನಾರಾಯಣ್</p></div>

ಸುನಿಲ್ ನಾರಾಯಣ್

   

(ಚಿತ್ರ ಕೃಪೆ: X@KKRiders)

ಅಬುಧಾಬಿ: ಟ್ವೆಂಟಿ-20 ಕ್ರಿಕೆಟ್‌ನಲ್ಲಿ ವೆಸ್ಟ್‌ ಇಂಡೀಸ್‌ನ ಮಿಸ್ಟರಿ ಸ್ಪಿನ್ನರ್ ಸುನಿಲ್ ನಾರಾಯಣ್ 600 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ.

ಇಂಟರ್‌ನ್ಯಾಷನಲ್ ಲೀಗ್ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾಗವಹಿಸಿರುವ ನಾರಾಯಣ್ ಈ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಅಬುಧಾಬಿ ಕಿಂಗ್ಸ್ ರೈಡರ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ನಾರಾಯಣ್, ಶಾರ್ಜಾ ವಾರಿಯರ್ಸ್ ವಿರುದ್ಧ ಈ ಮೈಲಿಗಲ್ಲು ತಲುಪಿದ್ದಾರೆ.

37 ವರ್ಷದ ಟ್ರಿನಿಡಾಡ್ ಮೂಲದ ನಾರಾಯಣ್, ಸ್ಪರ್ಧಾತ್ಮಕ ಟಿ20 ಕ್ರಿಕೆಟ್‌ನಲ್ಲಿ ಈವರೆಗೆ 568 ಪಂದ್ಯಗಳನ್ನು (558 ಇನಿಂಗ್ಸ್) ಆಡಿದ್ದಾರೆ.

19 ರನ್ನಿಗೆ ಐದು ವಿಕೆಟ್ ಗಳಿಸಿರುವುದು ಶ್ರೇಷ್ಠ ಸಾಧನೆಯಾಗಿದೆ. ಹಾಗೆಯೇ 12 ಸಲ ನಾಲ್ಕು ವಿಕೆಟ್ ಗಳಿಸಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ನಾರಾಯಣ್, ಕೋಲ್ಕತ್ತ ನೈಟ್ ರೈಡರ್ಸ್, ಅಬುಧಾಬಿ ನೈಟ್ ರೈಡರ್ಸ್, ಟ್ರಿನ್‌ಬಾಗೊ ನೈಟ್ ರೈಡರ್ಸ್, ಲಾಸ್ ಏಂಜಲೀಸ್ ನೈಟ್ ರೈಡರ್ಸ್ ಮುಂತಾದ ತಂಡಗಳನ್ನು ಪ್ರತಿನಿಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.