
Cricket - ICC T20 World Cup ಟ್ರೋಫಿ
ಫೆಬ್ರುವರಿ 7ರಿಂದ ಟಿ20 ವಿಶ್ವಕಪ್–2026 ಆರಂಭವಾಗಲಿದೆ. ಈ ಬಾರಿ ಭಾರತ ಹಾಗೂ ಶ್ರೀಲಂಕಾ ದೇಶಗಳಲ್ಲಿ ಈ ಪ್ರತಿಷ್ಠಿತ ಟೂರ್ನಿಯನ್ನು ಆಯೋಜಿಸಲಾಗಿದೆ. 2007ರವರೆಗೆ ಟಿ20 ಮಾದರಿ ಕ್ರಿಕೆಟ್ ಇರಲಿಲ್ಲ.
ಮೊದಲ ಬಾರಿ 2007ರಲ್ಲಿ ಟಿ20 ವಿಶ್ವಕಪ್ ನಡೆದಾಗ, ಭಾರತ ತಂಡ ಎಂ.ಎಸ್. ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು. ಅದಾದ ಬಳಿಕ ಭಾರತ ಚಾಂಪಿಯನ್ ಆಗಲು 17 ವರ್ಷ ತೆಗೆದುಕೊಂಡಿತು. 2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.
ಮಾತ್ರವಲ್ಲ, ರೋಹಿತ್ ಶರ್ಮಾ ಅವರು ನಿರಂತರವಾಗಿ 2007, 2009, 2010, 2012, 2014, 2016, 2021, 2022 ಮತ್ತು 2024 ರಲ್ಲಿ ಭಾರತ ಪರ ಆಡುವ ಮೂಲಕ ಎಲ್ಲಾ 9 ಟೂರ್ನಿಯಲ್ಲಿ ಕಣಕ್ಕಿಳಿದ ಆಟಗಾರನಾಗಿದ್ದಾರೆ.
2024ರಲ್ಲಿ ಭಾರತ ತಂಡವನ್ನು ನಾಯರಾಗಿ ಮುನ್ನಡೆಸಿದ್ದ ರೋಹಿತ್ ಶರ್ಮಾ, ಟೀಂ ಇಂಡಿಯಾ ಚಾಂಪಿಯನ್ ಆಗುತ್ತಿದ್ದಂತೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಪಡೆದುಕೊಂಡಿದ್ದರು.
ರೋಹಿತ್ ಶರ್ಮಾ– ಶಕಿಬ್ ಅಲ್ ಹಸನ್
ಮಾತ್ರವಲ್ಲ, ಇದೇ ಮೊದಲ ಬಾರಿಗೆ ಬಾಂಗ್ಲಾ ತಂಡ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದೆ. ಮಾತ್ರವಲ್ಲ ಕಳೆದ ವರ್ಷ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಶಕಿಬ್ ಅಲ್ ಹಸನ್ ಅವರು ಕೂಡ ಈ ಬಾರಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.
ಆ ಮೂಲಕ 2007, 2009, 2010, 2012, 2014, 2016, 2021, 2022 ಮತ್ತು 2024ರ ಟಿ20 ವಿಶ್ವಕಪ್ಗಳಲ್ಲಿ ಭಾಗವಹಿಸಿದ್ದ ಶಕಿಬ್ ಅಲ್ ಹಸನ್ ಅವರು ಈ ಬಾರಿ ಟೂರ್ನಿಯಲ್ಲಿ ಇರುವುದಿಲ್ಲ. ಬಾಂಗ್ಲಾ ತಂಡ ಒಂದು ಬಾರಿಯೂ ಚಾಂಪಿಯನ್ ಆಗಿಲ್ಲ. ಆದರೆ, ಶಕಿಬ್ ಅವರು ಬಾಂಗ್ಲಾ ಪರ ಅನೇಕ ಸ್ಮರಣೀಯ ಇನಿಂಗ್ಸ್ ಆಡಿದ್ದಾರೆ. ಅವರು 2025ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.