ADVERTISEMENT

ಟಿ20 ವಿಶ್ವಕಪ್‌: ಗುಂಪು ಪುನರ್‌ರಚನೆಗೆ ಬಾಂಗ್ಲಾದೇಶ ಮನವಿ

ಪಿಟಿಐ
Published 17 ಜನವರಿ 2026, 18:10 IST
Last Updated 17 ಜನವರಿ 2026, 18:10 IST
ಐಸಿಸಿ ಟ್ವೆಂಟಿ-20 ವಿಶ್ವಕಪ್
ಐಸಿಸಿ ಟ್ವೆಂಟಿ-20 ವಿಶ್ವಕಪ್   

ಢಾಕಾ: ತಮ್ಮ ತಂಡ ಆಡುವ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಪಟ್ಟು ಹಿಡಿದಿರುವ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಯು (ಬಿಸಿಬಿ), ಟಿ20 ವಿಶ್ವಕಪ್‌ನ ಗುಂಪುಗಳನ್ನು ಪುನರ್‌ರಚಿಸುವಂತೆ ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿಗೆ (ಐಸಿಸಿ) ಶನಿವಾರ ಮನವಿ ಮಾಡಿದೆ.

ಟಿ20 ವಿಶ್ವಕಪ್‌ ಸಂಬಂಧ ಉಂಟಾಗಿರುವ ಕಗ್ಗಂಟು ನಿವಾರಿಸಲು ಐಸಿಸಿ ತಂಡವು ಢಾಕಾಕ್ಕೆ ಭೇಟಿ ನೀಡಿದೆ. ಬಿಸಿಬಿಯೊಂದಿಗೆ ಐಸಿಸಿ ಅಧಿಕಾರಿಗಳು ಶನಿವಾರ ಸಭೆ ನಡೆಸಿದ್ದಾರೆ. ಸಿ ಗುಂಪಿನಲ್ಲಿರುವ ಬಾಂಗ್ಲಾ ತಂಡವನ್ನು ಹಾಗೂ ಬಿ ಗುಂಪಿನ ಐರ್ಲೆಂಡ್‌ ತಂಡವನ್ನು ಅದಲು ಬದಲು ಮಾಡುವಂತೆ ಬಿಸಿಬಿ ಕೋರಿದೆ. ಆದರೆ, ಈ ಮನವಿಯನ್ನು ಐಸಿಸಿ ಪುರಸ್ಕರಿಸುವುದು ಅನುಮಾನ ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಸಿ ಗುಂಪಿನಲ್ಲಿ ವೆಸ್ಟ್‌ ಇಂಡೀಸ್‌, ಬಾಂಗ್ಲಾದೇಶ, ಇಟಲಿ, ಇಂಗ್ಲೆಂಡ್ ಹಾಗೂ ನೇಪಾಳ ತಂಡಗಳು ಇವೆ. ಐರ್ಲೆಂಡ್‌, ಶ್ರೀಲಂಕಾ, ಆಸ್ಟ್ರೇಲಿಯಾ, ಒಮಾನ್‌ ಹಾಗೂ ಜಿಂಬಾಬ್ವೆ ತಂಡಗಳು ಬಿ ಗುಂಪಿನಲ್ಲಿವೆ. ಐರ್ಲೆಂಡ್‌ ತಂಡವು ಗುಂಪು ಹಂತದ ಪಂದ್ಯಗಳನ್ನು ಕೊಲಂಬೊ ಹಾಗೂ ಪಲ್ಲೆಕೆಲೆಯಲ್ಲಿ ಆಡಲಿದೆ. ಬಾಂಗ್ಲಾ ತಂಡವು ಕೋಲ್ಕತ್ತ ಮತ್ತು ಮುಂಬೈನಲ್ಲಿ ಆಡಬೇಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.