ADVERTISEMENT

ಟಿ20 ಕ್ರಿಕೆಟ್‌ನಲ್ಲಿ 3,000 ರನ್ ಪೂರೈಸಿದ ಹರ್ಮನ್‌ಪ್ರೀತ್ ಕೌರ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2023, 14:48 IST
Last Updated 20 ಫೆಬ್ರುವರಿ 2023, 14:48 IST
ಹರ್ಮನ್‌ಪ್ರೀತ್ ಕೌರ್‌ (ಪಿಟಿಐ ಚಿತ್ರ)
ಹರ್ಮನ್‌ಪ್ರೀತ್ ಕೌರ್‌ (ಪಿಟಿಐ ಚಿತ್ರ)   

ಗೆಬೆರಾ, ದಕ್ಷಿಣ ಆಫ್ರಿಕಾ: ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ಅವರು ಟಿ20 ಮಾದರಿಯಲ್ಲಿ 3,000 ರನ್ ಪೂರೈಸಿದರು. ಮಹಿಳೆಯರ ಟಿ20 ವಿಶ್ವಕಪ್‌ ಟೂರ್ನಿಯ ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ 7 ರನ್‌ ಗಳಿಸಿದ್ದ ವೇಳೆ ಅವರು ಈ ಸಾಧನೆ ಮಾಡಿದರು.

ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ 4ನೇ ಹಾಗೂ ಭಾರತದ ಮೊದಲ ಮಹಿಳಾ ಕ್ರಿಕೆಟರ್‌ ಎನಿಸಿದರು. ನ್ಯೂಜಿಲೆಂಡ್‌ ತಂಡದ ಸೂಝಿ ಬೆಟ್ಸ್‌ (3,820), ಆಸ್ಟ್ರೇಲಿಯಾದ ಮೆಗ್‌ ಲ್ಯಾನಿಂಗ್‌(3,346), ವೆಸ್ಟ್‌ ಇಂಡೀಸ್‌ನ ಸಾರಾ ಟೇಲರ್‌(3,166) ಉಳಿದ ಮೂವರು.

ಭಾರತ ಹಾಗೂ ಐರ್ಲೆಂಡ್‌ ತಂಡಗಳು ಇಲ್ಲಿನ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸುತ್ತಿವೆ. ಇದು ಹರ್ಮನ್‌ಗೆ 150ನೇ ಪಂದ್ಯ ಎಂಬುದು ವಿಶೇಷ. ಈ ಪಂದ್ಯದಲ್ಲಿ ಒಟ್ಟು 20 ಎಸೆತಗಳನ್ನು ಎದುರಿಸಿದ ಅವರು 13 ರನ್‌ ಗಳಿಸಿ ಔಟಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.