ADVERTISEMENT

ಟಿ20 ವಿಶ್ವಕಪ್: 25ರಂದು ಭಾರತ ತಂಡದ ಬಹುತೇಕ ಆಟಗಾರರು ನ್ಯೂಯಾರ್ಕ್‌ಗೆ

ಪಿಟಿಐ
Published 18 ಮೇ 2024, 23:16 IST
Last Updated 18 ಮೇ 2024, 23:16 IST
   

ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್‌ಗೆ ಭಾರತ ತಂಡದ ಬಹುತೇಕ ಆಟಗಾರರು ನೆರವು ಸಿಬ್ಬಂದಿಯೊಂದಿಗೆ ಮೇ 25ರಂದು ನ್ಯುಯಾರ್ಕ್‌ಗೆ ತೆರಳಿದ್ದಾರೆ. ಉಳಿದವರು ಮೇ 26ರ ಐಪಿಎಲ್ ಫೈನಲ್ ಬಳಿಕ ತೆರಳುವರು. 

ಪ್ಲೇ ಆಫ್‌ ಪ್ರವೇಶಿಸಲು ವಿಫಲರಾದ ತಂಡಗಳಲ್ಲಿರುವ ಆಟಗಾರರು ಮೇ 21ರಂದು ನ್ಯೂಯಾರ್ಕ್‌ಗೆ ತೆರಳಬೇಕೆಂದು ಈ ಹಿಂದೆ ನಿಗದಿಯಾಗಿತ್ತು. ಅಂದರೆ ಅಂತಿಮ ಲೀಗ್‌ ಪಂದ್ಯಗಳು ಮುಗಿದ ಎರಡು ದಿನ ನಂತರ. ಆದರೆ ಈ ಯೋಜನೆ ಬದಲಾಗಿದ್ದು, ಮೇ 25ರಂದು ಮೊದಲ ಬ್ಯಾಚ್‌ ಅಮೆರಿಕಕ್ಕೆ ಪ್ರಯಾಣಿಸುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.

ನೆರವು ಸಿಬ್ಬಂದಿ ಜೊತೆ ನಾಯಕ ರೋಹಿತ್‌ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್‌ಪ್ರೀತ್ ಬೂಮ್ರಾ, ರಿಷಭ್ ಪಂತ್, ಅರ್ಷದೀಪ್ ಸಿಂಗ್, ಅಕ್ಷರ್ ಪಟೇಲ್ ಈ ಬ್ಯಾಚ್‌ನಲ್ಲಿದ್ದಾರೆ.

ADVERTISEMENT

ಫೈನಲ್ ತಂಡಗಳಲ್ಲಿರುವ ಆಟಗಾರರು ಮಾತ್ರ ಫೈನಲ್ ನಂತರ, 27ರಂದು  ನಿರ್ಗಮಿಸಲಿದ್ದಾರೆ.

ಜೂನ್ 5ರಂದು ಭಾರತ ತಂಡ ನ್ಯೂಯಾರ್ಕ್‌ನಲ್ಲಿ ಐರ್ಲೆಂಡ್ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದ್ದು, ಜೂನ್ 9ರಂದು ಪಾಕಿಸ್ತಾನ ವಿರುದ್ಧ ಸೆಣಸಲಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯಜುವೇಂದ್ರ ಚಾಹಲ್, ಅರ್ಷ್‌ದೀಪ್ ಸಿಂಗ್, ಜಸ್‌ಪ್ರೀತ್  ಬೂಮ್ರಾ, ಮೊಹಮ್ಮದ್ ಸಿರಾಜ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.