ADVERTISEMENT

T20 WC 2026: ಮೊದಲ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ RCB ಆಲ್‌ರೌಂಡರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಫೆಬ್ರುವರಿ 2026, 4:30 IST
Last Updated 8 ಫೆಬ್ರುವರಿ 2026, 4:30 IST
<div class="paragraphs"><p>ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ರೊಮಾರಿಯೊ ಶೆಫರ್ಡ್</p></div>

ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ ರೊಮಾರಿಯೊ ಶೆಫರ್ಡ್

   

ಚಿತ್ರ: ICC

ಐಸಿಸಿ ಟಿ20 ವಿಶ್ವಕಪ್ (World cup) 2026ಕ್ಕೆ ನಿನ್ನೆ (ಶನಿವಾರ) ಅದ್ಧೂರಿ ಚಾಲನೆ ದೊರಕಿದೆ. ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನೆದರ್‌ಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದರೆ, ಟೂರ್ನಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಹಾಗೂ ಸ್ಕಾಟ್‌ಲ್ಯಾಂಡ್ ತಂಡಗಳು ಮುಖಾಮುಖಿಯಾಗಿದ್ದವು.

ADVERTISEMENT

ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ವೆಸ್ಟ್ ಇಂಡೀಸ್ ಅಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಹ್ಯಾಟ್ರಿಕ್ ಸಹಿತ ಒಂದೇ ಓವರ್‌ನಲ್ಲಿ 4 ವಿಕೆಟ್ ತೆಗೆಯುವ ಮೂಲಕ ಗಮನಸೆಳೆದರು. ಮಾತ್ರವಲ್ಲ, ಅವರ ಈ ಅಮೋಘ ಬೌಲಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ 35 ರನ್‌ಗಳ ಗೆಲುವು ಸಾಧಿಸಿತು.

ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡವು 2026ರ ಟಿ20 ವಿಶ್ವಕಪ್‌ನಲ್ಲಿ ಗೆಲುವಿನೊಂದಿಗೆ ಆರಂಭಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಬಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 182 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಸ್ಕಾಟ್ಲೆಂಡ್ 18.5 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು.

17ನೇ ಓವರ್‌ನಲ್ಲಿ ಹ್ಯಾಟ್ರಿಕ್ಸ್

ಶೆಫರ್ಡ್ ಅವರು ವಿಂಡೀಸ್ ಪರ 17ನೇ ಓವರ್‌ ಬೌಲಿಂಗ್ ಮಾಡುವ ಜವಾಬ್ದಾರಿ ವಹಿಸಿಕೊಂಡರು. ಆ ಓವರ್‌ನ ಎರಡನೇ ಎಸೆತದಲ್ಲಿ ಮ್ಯಾಥ್ಯೂ ಕ್ರಾಸ್, ಮೂರನೇ ಎಸೆತದಲ್ಲಿ ಮೈಕೆಲ್ ಲೀಸ್ಕ್, 4ನೇ ಎಸೆತದಲ್ಲಿ ಆಲಿವರ್ ಡೇವಿಡ್ಸನ್‌ ಅವರನ್ನು ಔಟ್ ಮಾಡಿ ಹ್ಯಾಟ್ರಿಕ್ ವಿಕೆಟ್ ತೆಗೆದರು. ಅದೇ ಓವರ್​​ನ ಕೊನೆಯ ಎಸೆತದಲ್ಲಿ ಸಫ್ಯಾನ್ ಷರೀಫ್‌ ಅವರನ್ನು ಔಟ್ ಮಾಡುವ ಮೂಲಕ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ತೆಗೆದ ಸಾಧನೆ ಮಾಡಿದರು. 

ಅಂತಿಮವಾಗಿ ಶೇಫರ್ಡ್ ಅವರು 3 ಓವರ್ ಬೌಲಿಂಗ್ ಮಾಡಿ 20 ರನ್ ಬಿಟ್ಟುಕೊಟ್ಟು 5 ವಿಕೆಟ್ ಕಬಳಿಸಿ ಮಿಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.