ಹಾರ್ದಿಕ್ ಪಾಂಡ್ಯ
ಪಿಟಿಐ ಚಿತ್ರ
ಇಂದೋರ್: ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಬರೋಡ ತಂಡದ ಪರ ಆಡುತ್ತಿರುವ ಭಾರತದ ತಂಡ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ತಮಿಳುನಾಡು ವಿರುದ್ಧದ ಪಂದ್ಯದ ಒಂದೇ ಓವರ್‌ನಲ್ಲಿ 4 ಸಿಕ್ಸರ್ ಸಿಡಿಸಿ ಗಮನ ಸೆಳೆದರು.
ಆ ಮೂಲಕ 222 ರನ್‌ಗಳ ಬೃಹತ್ ಗುರಿ ಎದುರು ತಮ್ಮ ತಂಡ ಗೆಲುವು ಸಾಧಿಸಲು ಕಾರಣರಾದರು.
ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 221 ರನ್ ಗಳಿಸಿತ್ತು.
ಬೃಹತ್ ಗುರಿ ಎದುರು ಬರೋಡ ತಂಡ 12.4 ಓವರ್‌ಗಳಲ್ಲಿ 4 ವಿಕೆಟ್‌ಗೆ 124 ರನ್ ಗಳಿಸಿದ್ದಾಗ ಕ್ರೀಸ್‌ಗಿಳಿದ ಹಾರ್ದಿಕ್, ಅಕ್ಷರಶಃ ಅಬ್ಬರಿಸಿದರು. ಮಧ್ಯಮವೇಗಿ ಗುರ್ಜಪ್‌ನೀತ್ ಸಿಂಗ್ ಎಸೆದ 17ನೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಹಾಗೂ 1 ಬೌಂಡರಿ ಸಹಿತ 29 ರನ್ ಚಚ್ಚಿದರು.
ಕೇವಲ 30 ಎಸೆತಗಳಲ್ಲೇ 4 ಬೌಂಡರಿ ಮತ್ತು 7 ಸಿಕ್ಸರ್ ಸಹಿತ 69 ರನ್ ಗಳಿಸಿದ್ದ ಅವರು, ಅಂತಿಮ ಓವರ್‌ನ ಮೊದಲ ಎಸೆತದಲ್ಲಿ ರನೌಟ್ ಆದರು.
ಹಾರ್ದಿಕ್ ವಿಕೆಟ್ ಪತನದ ಬಳಿಕ ಬರೋಡ ತಂಡಕ್ಕೆ 5 ಎಸೆತಗಳಲ್ಲಿ 9 ರನ್ ಬೇಕಿತ್ತು. ಜವಾಬ್ದಾರಿ ಅರಿತು ಆಡಿದ ರಾಜ್ ಲಿಂಬಾನಿ (4 ಎಸೆತ 4 ರನ್) ಮತ್ತು ಅತಿತ್ ಶೇಠ್ (3 ಎಸೆತ 7 ರನ್) ತಮ್ಮ ತಂಡವನ್ನು ಗೆಲುವಿನ ದಡ ಸೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.