ADVERTISEMENT

ಐಪಿಎಲ್ ಟೈಟಲ್ ಪ್ರಾಯೋಜಕತ್ವ: ಟಾಟಾ ಆಸಕ್ತಿ

ಪಿಟಿಐ
Published 14 ಆಗಸ್ಟ್ 2020, 19:30 IST
Last Updated 14 ಆಗಸ್ಟ್ 2020, 19:30 IST
ಐಪಿಎಲ್ ಟ್ರೋಫಿ
ಐಪಿಎಲ್ ಟ್ರೋಫಿ   

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಟೈಟಲ್ ಪ್ರಾಯೋಜಕತ್ವ ಪಡೆಯುವ ಸ್ಪರ್ಧೆಗೆ ಟಾಟಾ ಸಮೂಹವೂ ಧುಮುಕಿದೆ.

ಈ ವರ್ಷ ಯುನೈಟೆಡ್‌ ಅ ರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಪ್ರಾಯೋಜಕತ್ವದಿಂದ ಚೀನಾ ಮೂಲದ ವಿವೊ ಮೊಬೈಲ್ ಕಂಪೆನಿಯು ಹಿಂದೆ ಸರಿದಿದೆ.

ಇದರಿಂದಾಗಿ ಹೊಸ ಪ್ರಾಯೋಜಕರಿಗಾಗಿ ಬಿಸಿಸಿಯ ಬಿಡ್ ಪ್ರಕ್ರಿಯೆ ನಡೆಸಲಿದೆ. ಈಗಾಗಲೇ ಪತಂಜಲಿ, ಜಿಯೊ ಕಮ್ಯುನಿಕೇಷನ್ಸ್‌, ಅನ್‌ಅಕಾಡೆಮಿ ಮತ್ತು ಡ್ರೀಮ್ ಇಲೆವನ್ ಬಿಡ್‌ ಅರ್ಜಿ ಸಲ್ಲಿಸಿವೆ ಎಂದು ತಿಳಿದು ಬಂದಿದೆ.

ADVERTISEMENT

‘ಟಾಟಾ ಸಮೂಹವು ಪ್ರಾಯೋಜಕತ್ವಕ್ಕಾಗಿ ಆಸಕ್ತಿ ತೋರಿಸಿದೆ. ಐಪಿಎಲ್ ಟೈಟಲ್ ಹಕ್ಕುಗಳನ್ನು ಖರೀದಿಸಲು ಅರ್ಜಿ ಸಲ್ಲಿಸಿದೆ’ಎಂದು ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.