ADVERTISEMENT

IPL-2020 | ಕೆಕೆಆರ್ ತಂಡಕ್ಕೆ ಟಿಮ್‌ ಸೀಫರ್ಟ್‌

ಪಿಟಿಐ
Published 18 ಅಕ್ಟೋಬರ್ 2020, 13:06 IST
Last Updated 18 ಅಕ್ಟೋಬರ್ 2020, 13:06 IST
ಟಿಮ್‌ ಸೀಫರ್ಟ್‌ (ಎಡ)–ಪಿಟಿಐ ಚಿತ್ರ
ಟಿಮ್‌ ಸೀಫರ್ಟ್‌ (ಎಡ)–ಪಿಟಿಐ ಚಿತ್ರ   

ವೆಲ್ಲಿಂಗ್ಟನ್‌ : ನ್ಯೂಜಿಲೆಂಡ್‌ನ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್‌ ಟಿಮ್‌ ಸೀಫರ್ಟ್‌ ಅವರು ಐಪಿಎಲ್‌ ಟೂರ್ನಿಯಲ್ಲಿ ಕೋಲ್ಕತ್ತ ನೈಟ್‌ ರೈಡರ್ಸ್‌ (ಕೆಕೆಆರ್‌) ತಂಡದ ಪರ ಆಡಲಿದ್ದಾರೆ. ಗಾಯದಿಂದ ಹೊರಗುಳಿದಿರುವ ಅಮೆರಿಕ ಆಟಗಾರ ಅಲಿ ಖಾನ್‌ ಬದಲಿಗೆ ಸೀಫರ್ಟ್‌ ಸ್ಥಾನ ಪಡೆದಿದ್ದಾರೆ.

‘ವೇಗದ ಬೌಲರ್‌ ಅಲಿ ಖಾನ್‌ ಐಪಿಎಲ್‌ನಲ್ಲಿ ಆಡಲು ಮೊದಲ ಬಾರಿ ಅವಕಾಶ ಗಳಿಸಿದ್ದರು. ಆದರೆ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ವೇಳೆ ಭುಜದ ನೋವಿನಿಂದ ಬಳಲಿದ್ದ ಅವರು ಐಪಿಎಲ್‌ನಲ್ಲಿ ಒಂದೂ ಪಂದ್ಯ ಆಡಲಾಗದೆ ಮರಳಿದ್ದರು. ಅವರ ಬದಲಾಗಿ ಸೀಪರ್ಟ್‌ ಅವರನ್ನು ಕೆಕೆಆರ್‌ ಸೇರಿಸಿಕೊಂಡಿದೆ‘ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ವರದಿ ಮಾಡಿದೆ.

ಐಪಿಎಲ್‌ನಲ್ಲಿ ಎರಡು ಬಾರಿ ಚಾಂಪಿಯನ್‌ ಆಗಿರುವ ಕೋಲ್ಕತ್ತ ನೈಟ್‌ ರೈಡರ್ಸ್, ಗಾಯಗೊಂಡಿದ್ದ ಇಂಗ್ಲೆಂಡ್‌ ವೇಗಿ ಹ್ಯಾರಿ ಗರ್ನಿ ಬದಲಿಗೆ ಅಲಿ ಅವರಿಗೆ ಅವಕಾಶ ನೀಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.