ಅಬುಧಾಬಿ: ಇಲ್ಲಿ ನಡೆದ ಒಮನ್ ವಿರುದ್ಧದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ ಯುಎಇ ತಂಡ 42 ರನ್‌ಗಳ ಗೆಲುವು ದಾಖಲಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಯುಎಇ, 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 172 ರನ್ ಪೇರಿಸಿತು. ಯುಎಇ ಪರ ಆರಂಭಿಕರಾದ ಅಲಿಶನ್ ಶರಫು 51 ಮತ್ತು ನಾಯಕ ಮುಹಮ್ಮದ್ ವಾಸೀಂ 69 ರನ್ ಸಿಡಿಸಿ ತಂಡಕ್ಕೆ ಉತ್ತಮ ಬುನಾದಿ ಹಾಕಿದರು. ಉಳಿದಂತೆ, ಮುಹಮ್ಮದ್ ಜುಹಬ್ 21 ಮತ್ತು ಹರ್ಷಿತ್ ಕೌಶಿಕ್ 19 ರನ್ ಸಿಡಿಸಿದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಒಮನ್ ತಂಡ ಯುಎಇ ಬೌಲಿಂಗ್ ದಾಳಿಗೆ ತತ್ತರಿಸಿ 18.4 ಓವರ್‌ಗಳಲ್ಲಿ 130 ರನ್‌ಗಳಿಗೆ ಆಲೌಟ್ ಆಗುವ ಮೂಲಕ 42 ರನ್‌ಗಳಿಂದ ಸೋಲೊಪ್ಪಿಕೊಂಡಿತು.
ಒಮನ್ ಪರ ನಾಯಕ ಜತಿಂದರ್ ಸಿಂಗ್ 20, ಆರ್ಯನ್ ಬಿಷ್ಠ 24 ಮತ್ತು ವಿನಾಯಕ ಶುಕ್ಲಾ 20 ರನ್ ಗಳಿಸಿದರು.
ಯುಎಇ ಪರ ಜುನೈದ್ ಸಿದ್ದಿಕಿ 4 ಓವರ್‌ಗಳಲ್ಲಿ 23 ರನ್ ನೀಡಿ 4 ವಿಕೆಟ್ ಉರುಳಿಸುವ ಮೂಲಕ ಅತ್ಯುತ್ತಮ ಬೌಲರ್ ಎನಿಸಿದರು. ಉಳಿದಂತೆ, ಹೈದರ್ ಅಲಿ ಮತ್ತು ಮುಹಮ್ಮದ್ ಜವಾದುಲ್ಲಾ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ಯುಎಇ: 20 ಓವರ್‌ಗಳಲ್ಲಿ 172/5
* ಅಲಿಶನ್ ಶರಫು 51 ರನ್
* ಮುಹಮ್ಮದ್ ವಾಸೀಂ 69 ರನ್
ಬೌಲಿಂಗ್: ಜಿತೆನ್ ರಾಮನಂದಿ 24/2
ಒಮನ್ 20 ಓವರ್‌ಗಳಲ್ಲಿ 130/10
* ಜತಿಂದರ್ ಸಿಂಗ್ 20 ರನ್
* ಆರ್ಯನ್ ಬಿಷ್ಠ 24 ರನ್
ಬೌಲಿಂಗ್: ಜುನೈದ್ ಸಿದ್ದಿಕಿ 23/4
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.