ADVERTISEMENT

Video | ಅಭಿಮಾನಿಗಳ ಬಳಿ ಚಾಕೋಲೆಟ್ ಕೇಳಿದ ಧೋನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2023, 12:31 IST
Last Updated 11 ಸೆಪ್ಟೆಂಬರ್ 2023, 12:31 IST
<div class="paragraphs"><p>ಚಿತ್ರ ಕೃಪೆ–&nbsp;@mufaddal_vohra</p></div>

ಚಿತ್ರ ಕೃಪೆ– @mufaddal_vohra

   

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ಅವರು ಅಭಿಮಾನಿಯೊಬ್ಬರ ಬಳಿ ಚಾಕೋಲೆಟ್ ಕೊಡುವಂತೆ ಕೇಳಿರುವ ವಿಡಿಯೊ ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಭಿಮಾನಿಗಳ ಜೊತೆ ಇರುವ ಧೋನಿ ವಿಡಿಯೊವನ್ನು ಕ್ರಿಕೆಟ್‌ ಅಭಿಮಾನಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಧೋನಿ, ಅಮೆರಿಕದಲ್ಲಿರುವ ಅವರ ಅಭಿಮಾನಿಗಳಿಗೆ ಆಟೋಗ್ರಾಫ್‌ ಹಾಗೂ ಸೆಲ್ಫಿ ನೀಡಿದ್ದಾರೆ. ‘ಈ ವೇಳೆ ಆಟೋಗ್ರಾಫ್‌ಗೆ ಬದಲಾಗಿ ನನಗೆ ಚಾಕೋಲೆಟ್ ಕೊಡಿ ‘ ಎಂದು ಕೇಳಿರುವುದು ವಿಡಿಯೊದಲ್ಲಿದೆ.

ಧೋನಿ ಅವರ ವಿನಮ್ರತೆ ಹಾಗೂ ಸರಳತೆಯ ನಡೆಗೆ ಮತ್ತೊಮ್ಮೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಧೋನಿ ಅವರು ಗಾಲ್ಫ್ ಆಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ಹರಿದಾಡಿತ್ತು. ಸ್ವತಃ ಟ್ರಂಪ್ ಅವರೇ ಧೋನಿಗೆ ಗಾಲ್ಫ್ ಆಟಕ್ಕೆ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿದೆ.

ಧೋನಿ ನಾಯಕತ್ವದಲ್ಲಿ ಭಾರತ ತಂಡವು 2007ರ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. 2014ರಲ್ಲಿ ಟೆಸ್ಟ್ ಕ್ರಿಕೆಟ್‌ ಹಾಗೂ 2020ರ ಆಗಸ್ಟ್‌ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಧೋನಿ ವಿದಾಯ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.