ADVERTISEMENT

Vijay Hazare Trophy: ಸೆಮಿಯಲ್ಲಿ ಎಡವಿದ ಕರ್ನಾಟಕ; ಟೂರ್ನಿಯಿಂದ ನಿರ್ಗಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2026, 16:12 IST
Last Updated 15 ಜನವರಿ 2026, 16:12 IST
   

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ದೇಶೀಯ ಏಕದಿನ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿ ವಿದರ್ಭ ವಿರುದ್ಧ ಸೋಲನುಭವಿಸಿರುವ ಕರ್ನಾಟಕದ ಪ್ರಶಸ್ತಿ ಕನಸು ಭಗ್ನಗೊಂಡಿದೆ.

ಇಲ್ಲಿನ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಇಂದು (ಗುರುವಾರ) ನಡೆದ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಆರು ವಿಕೆಟ್ ಅಂತರದ ಗೆಲುವು ಸಾಧಿಸಿದ ವಿದರ್ಭ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಇದರೊಂದಿಗೆ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಮಯಂಕ್ ಅಗರವಾಲ್ ಪಡೆ ಸೋಲಿನ ಆಘಾತಕ್ಕೊಳಗಾಗಿದೆ.

ADVERTISEMENT

ಮೊದಲು ಬ್ಯಾಟಿಂಗ್ ಕರ್ನಾಟಕ 49.4 ಓವರ್‌ಗಳಲ್ಲಿ 280 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಕರುಣ್ ನಾಯರ್ 76, ಕೃಷ್ಣನ್ ಶ್ರೀಜಿತ್ 54 ರನ್ ಗಳಿಸಿದರು. ಮಯಂಕ್ ಅಗರವಾಲ್ (9) ಹಾಗೂ ದೇವದತ್ತ ಪಡಿಕ್ಕಲ್ (4) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.

ಈ ಗುರಿ ಬೆನ್ನಟ್ಟಿದ ವಿದರ್ಭ 46.2 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಆರಂಭಿಕ ಬ್ಯಾಟರ್ ಮೋಖಾಡೆ ಅಮೋಘ ಶತಕ (138) ಗಳಿಸಿದರೆ ರವಿಕುಮಾರ್ ಸಮರ್ಥ್ 76 ರನ್ ಗಳಿಸಿ ಔಟಾಗದೆ ಉಳಿದರು. ಕರ್ನಾಟಕದ ಪರ ಅಭಿಲಾಷ್ ಶೆಟ್ಟಿ ಮೂರು ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.