ADVERTISEMENT

ಹಾರ್ದಿಕ್ ಬದಲಿಗೆ ವಿಜಯ್‌ ಶಂಕರ್‌ಗೆ ಸ್ಥಾನ; ನ್ಯೂಜಿಲೆಂಡ್ ಸರಣಿಗೆ ಶುಬಮನ್‌

ಟೀಂ ಇಂಡಿಯಾ

ಏಜೆನ್ಸೀಸ್
Published 13 ಜನವರಿ 2019, 4:20 IST
Last Updated 13 ಜನವರಿ 2019, 4:20 IST
ಆಲ್‌–ರೌಂಡರ್‌ ವಿಜಯ್‌ ಶಂಕರ್‌ ಹಾಗೂ ಬ್ಯಾಟ್ಸ್‌ಮನ್‌ ಶುಬಮನ್‌ ಗಿಲ್‌
ಆಲ್‌–ರೌಂಡರ್‌ ವಿಜಯ್‌ ಶಂಕರ್‌ ಹಾಗೂ ಬ್ಯಾಟ್ಸ್‌ಮನ್‌ ಶುಬಮನ್‌ ಗಿಲ್‌   

ಸಿಡ್ನಿ:ಮಹಿಳೆಯರ ಕುರಿತ ಆಕ್ಷೇಪಾರ್ಹ ಹೇಳಿಕೆಗಳಿಂದಾಗಿ ಭಾರತ ಕ್ರಿಕೆಟ್ ತಂಡದಿಂದ ಅಮಾನತಾಗಿರುವ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್.ರಾಹುಲ್ ಬದಲಾಗಿ ಆಲ್‌–ರೌಂಡರ್‌ ವಿಜಯ್‌ ಶಂಕರ್‌ ಹಾಗೂ ಬ್ಯಾಟ್ಸ್‌ಮನ್‌ ಶುಬಮನ್‌ ಗಿಲ್‌ಗೆ ತಂಡದಲ್ಲಿ ಸ್ಥಾನ ದೊರೆತಿದೆ.

ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಏಕದಿನ ಪಂದ್ಯಗಳನ್ನು ಆಡುತ್ತಿದೆ. ಕಾಫಿ ವಿತ್‌ ಕರಣ್‌ಟಿವಿ ಸೆಲೆಬ್ರಿಟಿ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಕೆ.ಎಲ್.ರಾಹುಲ್ ನೀಡಿರುವ ಹೇಳಿಕೆಗಳಿಗೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಳ್ಳುವವರೆಗೂ ಅವರನ್ನು ತಂಡದಿಂದ ಅಮಾನತು ಮಾಡಲಾಗಿದ್ದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಪಂದ್ಯಗಳಲ್ಲಿ ಆಡಲು ವಿಜಯ್‌ ಶಂಕರ್‌ ಹಾಗೂ ಶುಬಮನ್‌ ಗಿಲ್‌ ಅವಕಾಶ ಪಡೆದಿದ್ದಾರೆ.

ಅಡೆಲೇಡ್‌ನಲ್ಲಿ ಮಂಗಳವಾರ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಹೊನಲು ಬೆಳಕಿನ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ವಿಜಯ್‌ ಶಂಕರ್‌ ತಂಡವನ್ನು ಸೇರಲಿದ್ದಾರೆ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ತಿಳಿಸಿದೆ.ವಿಜಯ್‌ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನ ಏಕದಿನ ಸರಣಿಯಲ್ಲಿ ಆಡಲಿದ್ದು, ಶುಬ್ಮನ್‌ ಗುಲ್‌ ನ್ಯೂಜಿಲೆಂಡ್‌ನ ಏಕದಿನ ಮತ್ತು ಟಿ20 ಸರಣಿಯಲ್ಲಿ ತಂಡಕ್ಕೆ ಸೇರಲಿದ್ದಾರೆ.

ಶನಿವಾರ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್‌ ಶರ್ಮಾ ಅವರ ಶತಕದ ಆಟದ ನಡುವೆಯೂ ಭಾರತ ತಂಡ 34 ರನ್‌ಗಳ ಸೋಲು ಕಂಡಿತು.

‘ಕಾಫಿ ವಿಥ್‌ ಕರಣ್‌’ ಸೆಲೆಬ್ರಿಟಿ ಚಾಟ್ ಕಾರ್ಯಕ್ರಮದಲ್ಲಿ ಪಾಂಡ್ಯ ಮ ತಾವು ಅನುಭವಿಸಿದ ಲೈಂಗಿಕತೆಯ ಕುರಿತು ಹೇಳಿದ್ದರು, ರಾಹುಲ್‌ ಅದಕ್ಕೆ ಧ್ವನಿ ಕೂಡಿಸಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿ ಮುಖ್ಯಸ್ಥ ವಿನೋದ್ ರಾಯ್‌ ಅವರು ಇವರಿಬ್ಬರ ಮೇಲೆ ಎರಡು ಪಂದ್ಯಗಳ ನಿಷೇಧ ಹೇರಬೇಕು ಎಂದು ಗುರುವಾರ ಶಿಫಾರಸು ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.