ಅಭಿಮಾನಿಗಳ ನಡುವೆ ವಿರಾಟ್ ಕೊಹ್ಲಿ
ಚಿತ್ರ ಕೃಪೆ: ಎಎನ್‌ಐ
ಜನವರಿ 11ರಿಂದ ವಡೋದರದಲ್ಲಿ ಆರಂಭವಾಗಲಿರುವ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಗೆ ಭಾರತ ಸಜ್ಜಾಗಿದೆ. ಈ ಬೆನ್ನಲ್ಲೇ ತಂಡದ ಸ್ಟಾರ್ ಆಟಗಾರ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಬುಧವಾರ ಸಂಜೆ ವಡೋದರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ.
ಕೊಹ್ಲಿ ಆಗಮನದ ಬಗ್ಗೆ ತಿಳಿದಿದ್ದ ಸಾವಿರಾರು ಅಭಿಮಾನಿಗಳು ವಿಮಾನ ನಿಲ್ದಾಣಕ್ಕೆ ಜಮಾಯಿಸಿದ್ದರು. ಕೊಹ್ಲಿ ಅವರು ಬರುತ್ತಿದ್ದಂತೆ ‘ಕೊಹ್ಲಿ ಕೊಹ್ಲಿ’ ಎಂಬ ಘೋಷಣೆ ಕೂಗುತ್ತ, ಅವರ ಸುತ್ತಲು ಸುತ್ತುವರೆದು ಪೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಜನಸಂದಣಿಯ ನಡುವೆ ವಿರಾಟ್ ಕಸಿವಿಸಿಗೊಂಡರೂ, ತಾಳ್ಮೆಯಿಂದ ಮುಗುಳ್ನಕ್ಕು, ಕೆಲವು ಅಭಿಮಾನಿಗಳ ಫೋಟೊಗಳಿಗೆ ಪೋಸ್ ನೀಡಿ ಕಾರಿನಲ್ಲಿ ಕುಳಿತುಕೊಂಡರು. ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಉತ್ತಮ ಲಯದಲ್ಲಿದ್ದು ಶತಕದಾಟವನ್ನು ಆಡಿದ್ದಾರೆ. ಇದೀಗ ನ್ಯೂಜಿಲೆಂಡ್ ವಿರುದ್ದವೂ ಉತ್ತಮ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದ್ದಾರೆ
ಭಾರತ ಹಾಗೂ ನ್ಯೂಜಿಲೆಂಡ್ ಪಂದ್ಯದ ವೇಳಾಪಟ್ಟಿ ಹೀಗಿದೆ:
ಮೊದಲ ಏಕದಿನ ಪಂದ್ಯ: ಜನವರಿ 11- ವಡೋದರ
ಎರಡನೇ ಏಕದಿನ ಪಂದ್ಯ: ಜನವರಿ 14- ರಾಜಕೋಟ್
ಮೂರನೇ ಏಕದಿನ ಪಂದ್ಯ: ಜನವರಿ 18- ಇಂದೋರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.