ADVERTISEMENT

ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಇಶಾನ್ ಕಿಶನ್ ಆರಂಭಿಕ ಬ್ಯಾಟ್ಸ್‌ಮನ್?

ಪಿಟಿಐ
Published 10 ಅಕ್ಟೋಬರ್ 2021, 4:09 IST
Last Updated 10 ಅಕ್ಟೋಬರ್ 2021, 4:09 IST
ಇಶಾನ್ ಕಿಶನ್
ಇಶಾನ್ ಕಿಶನ್   

ಅಬುಧಾಬಿ: ಮುಂಬರುವ ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಯುವ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಆಡುವ ಎಲ್ಲ ಸಾಧ್ಯತೆಗಳೂ ಇವೆ.

ಈ ವಿಷಯವನ್ನು ಸ್ವತಃ ಇಶಾನ್ ಅವರೇ ಹೇಳಿದ್ಧಾರೆ. ಶುಕ್ರವಾರ ಐಪಿಎಲ್‌ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದ ಇಶಾನ್ ಈ ಮಾತು ಹೇಳಿದ್ದಾರೆ.

‘ಇದೇ ತಿಂಗಳು ಯುಎಇ ಹಾಗೂ ಒಮನ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ತಮ್ಮನ್ನು ಆರಂಭಿಕ ಬ್ಯಾಟ್ಸ್‌ಮನ್ ಆಗಿ ಪರಿಗಣಿಸಿರುವುದಾಗಿ ನಾಯಕ ವಿರಾಟ್ ಕೊಹ್ಲಿ ಈಚೆಗೆ ಹೇಳಿದ್ದಾರೆ. ನನಗೂ ಆರಂಭಿಕನಾಗಿ ಆಡುವುದು ಇಷ್ಟ. ಆದನ್ನೇ ವಿರಾಟ್ ಕೂಡ ತಿಳಿಸಿದ್ದಾರೆ. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವಾಗ ಯಾವುದೇ ಕ್ರಮಾಂಕದಲ್ಲಿಯೂ ಕಣ ಕ್ಕಿಳಿಯಲು ಸಿದ್ಧರಾಗಿರಬೇಕು. ತಂಡಕ್ಕೆ ಅಗತ್ಯವಾದದ್ದನ್ನು ಕೊಡಲು ಬದ್ಧರಾಗಿರಬೇಕು’ ಎಂದು ಇಶಾನ್ ಹೇಳಿದ್ದಾರೆ.

ADVERTISEMENT

'ವಿಶ್ವಕಪ್‌ಗೂ ಮೊದಲು ಬ್ಯಾಟಿಂಗ್ ಲಯ ಕಂಡುಕೊಳ್ಳಲು ಸಾಧ್ಯವಾಗಿರುವುದರಿಂದ ನಿರಾಳವಾಗಿದ್ದೇನೆ. ಎದುರಾಗುವ ಎಲ್ಲ ಸನ್ನಿವೇಶಗಳನ್ನು ಎದುರಿಸಲು ಸಿದ್ದರಾಗಿರಬೇಕು. ಆ ಮನಸ್ಥಿತಿ ಕಾಪಾಡಿಕೊ ಳ್ಳುವುದು ಮುಖ್ಯ. ಕೆಟ್ಟ ಫಾರ್ಮ್ ಸಂದರ್ಭದಲ್ಲಿ ನಾನು ವಿರಾಟ್, ಹಾರ್ದಿಕ್ ಪಾಂಡ್ಯ ಹಾಗೂ ಕೆಪಿ (ಕೀರನ್ ಪೊಲಾರ್ಡ್) ಅವರೊಂದಿಗೆ ಸಮಾಲೋಚನೆ ನಡೆಸಿದ್ದೆ' ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.