ADVERTISEMENT

ಕ್ರಿಕೆಟ್: ಸತತ 4ನೇ ವರ್ಷವೂ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿದ ಕೊಹ್ಲಿ

ಏಜೆನ್ಸೀಸ್
Published 23 ಡಿಸೆಂಬರ್ 2019, 11:41 IST
Last Updated 23 ಡಿಸೆಂಬರ್ 2019, 11:41 IST
   

ವಿಶಾಖಪಟ್ಟಣ:ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ ನಾಲ್ಕನೇ ವರ್ಷವೂ ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿದರು.

2016, 2017, 2018ರಲ್ಲಿ ಕ್ರಮವಾಗಿ 2,595 ರನ್‌,2,818 ರನ್‌, ಹಾಗೂ2,735 ರನ್‌ ಗಳಿಸಿ ಮೊದಲ ಸ್ಥಾನದಲ್ಲಿದ್ದ ಕೊಹ್ಲಿ, ಈ ವರ್ಷವೂ ಮೂರು ಮಾದರಿಯಕ್ರಿಕೆಟ್‌ನಿಂದ (2,455) ಹೆಚ್ಚು ರನ್‌ ಕಲೆಹಾಕಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ 8 ಪಂದ್ಯಗಳ 11 ಇನಿಂಗ್ಸ್‌ ಆಡಿರುವ ಕೊಹ್ಲಿ 612 ರನ್‌ ಗಳಿಸಿದ್ದಾರೆ. ಉಳಿದಂತೆ 26 ಏಕದಿನ ಪಂದ್ಯಗಳ 25 ಇನಿಂಗ್ಸ್‌ನಿಂದ 1,377 ‌ಹಾಗೂ ಟಿ20ಯಲ್ಲಿ 10 ಪಂದ್ಯಗಳ 10 ಇನಿಂಗ್ಸ್‌ನಿಂದ 466 ಕಲೆಹಾಕಿದ್ದಾರೆ.

ಈ ವರ್ಷ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ರೋಹಿತ್‌ ಶರ್ಮಾ ಎರಡನೇ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಈ ವರ್ಷ ಹೆಚ್ಚು ರನ್‌ ಕಲೆಹಾಕಿದ ಬ್ಯಾಟ್ಸ್‌ಮನ್‌ ಎನಿಸಿರುವ ರೋಹಿತ್‌, ಒಟ್ಟು 28 ಪಂದ್ಯಗಳ 27 ಇನಿಂಗ್ಸ್‌ಗಳಿಂದ 1,490 ರನ್‌ ಕಲೆಹಾಕಿದ್ದಾರೆ. ಈ ವರ್ಷ ಆಡಿರುವ ಟೆಸ್ಟ್‌ ಕ್ರಿಕೆಟ್‌ನ 5 ಪಂದ್ಯಗಳ ಆರು ಇನಿಂಗ್ಸ್‌ನಿಂದ 556 ರನ್‌ ಮತ್ತು ಟಿ20ಯ14 ಇನಿಂಗ್ಸ್‌ಗಳಿಂದ 396 ರನ್‌ ಕಲೆಹಾಕಿದ್ದಾರೆ.

ಮೂರನೇ ಸ್ಥಾನದಲ್ಲಿ ಪಾಕಿಸ್ತಾನದ ಬಾಬರ್‌ ಅಜಂ ಇದ್ದಾರೆ. ಅವರು ಒಟ್ಟು 36 ಪಂದ್ಯಗಳ 41 ಇನಿಂಗ್ಸ್‌ನಿಂದ 2,082 ರನ್‌ ಗಳಿಸಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಐವರು
ಮಾರ್ನಸ್‌ ಲಾಬುಶೇನ್‌
(ಆಸ್ಟ್ರೇಲಿಯಾ): 1,022 (10 ಪಂದ್ಯ 15 ಇನಿಂಗ್ಸ್‌)
ಸ್ಟೀವ್‌ ಸ್ಮಿತ್‌ (ಆಸ್ಟ್ರೇಲಿಯಾ): 873 (7 ಪಂದ್ಯ, 11 ಇನಿಂಗ್ಸ್‌)
ಜೋ ರೂಟ್‌ (ಇಂಗ್ಲೆಂಡ್‌): 774 (11 ಪಂದ್ಯ, 21 ಇನಿಂಗ್ಸ್‌)
ಬೆನ್‌ ಸ್ಟೋಕ್ಸ್‌ (ಇಂಗ್ಲೆಂಡ್‌): 772 (10 ಪಂದ್ಯ, 19 ಇನಿಂಗ್ಸ್‌)
ಮಯಂಕ್‌ ಅಗರವಾಲ್ (ಭಾರತ): 754 (8 ಪಂದ್ಯ, 11 ಇನಿಂಗ್ಸ್‌)

ಏಕದಿನ ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಐವರು
ರೋಹಿತ್‌ ಶರ್ಮಾ
(ಭಾರತ): 1490 (28 ಪಂದ್ಯ, 27 ಇನಿಂಗ್ಸ್‌)
ವಿರಾಟ್‌ ಕೊಹ್ಲಿ(ಭಾರತ): 1377 (26 ಪಂದ್ಯ, 25 ಇನಿಂಗ್ಸ್‌)
ಶಾಯ್‌ ಹೋಪ್‌ (ವೆಸ್ಟ್ಇಂಡೀಸ್‌): 1345(28 ಪಂದ್ಯ, 26 ಇನಿಂಗ್ಸ್‌)
ಆ್ಯರನ್‌ ಫಿಂಚ್‌ (ಆಸ್ಟ್ರೇಲಿಯಾ): 1141 (23 ಪಂದ್ಯ, 23 ಇನಿಂಗ್ಸ್‌)
ಬಾಬರ್‌ ಅಜಂ (ಪಾಕಿಸ್ತಾನ): 1092 (20 ಪಂದ್ಯ, 20 ಇನಿಂಗ್ಸ್‌)

ಟಿ20 ಕ್ರಿಕೆಟ್‌ನಲ್ಲಿ ಹೆಚ್ಚು ರನ್‌ ಗಳಿಸಿದ ಐವರು
ಪೌಲ್‌ ಸ್ಟಿರ್ಲಿಂಗ್
(ಐರ್ಲೆಂಡ್‌): 748 (20 ಪಂದ್ಯ, 20 ಇನಿಂಗ್ಸ್‌)
ಕೆವಿನ್‌ ಒಬ್ರಿಯಾನ್‌ (ಐರ್ಲೆಂಡ್‌): 729 (23 ಪಂದ್ಯ, 23 ಇನಿಂಗ್ಸ್‌)
ಮ್ಯಾಕ್ಸ್‌ ಒಡೌಡ್‌ (ನೆದರ್‌ಲೆಂಡ್‌): 702(24 ಪಂದ್ಯ, 24 ಇನಿಂಗ್ಸ್‌)
ಬೆನ್‌ ಕೂಪರ್‌ (ನೆದರ್‌ಲೆಂಡ್‌): 637(21 ಪಂದ್ಯ, 21 ಇನಿಂಗ್ಸ್‌)
ಆ್ಯಂಡ್ರೋ ಬಾಲ್ಬಿರ್ನೈ (ಐರ್ಲೆಂಡ್‌): 601(21 ಪಂದ್ಯ, 20 ಇನಿಂಗ್ಸ್‌)

(ಈ ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌,ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್‌ ನಡುವಣ ತಲಾ ಒಂದೊಂದು ಟೆಸ್ಟ್‌ ಬಾಕಿ ಇವೆ. ಅವು ಡಿಸೆಂಬರ್‌ 26–30ರಲ್ಲಿ ನಡೆಯಲಿವೆ.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.