ವಿರಾಟ್ ಕೊಹ್ಲಿ
(ಪಿಟಿಐ ಚಿತ್ರ)
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತೊರೆಯಲಿರುವ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿದಾಯ ಸಲ್ಲಿಸಲಿದ್ದಾರೆ ಎಂದು ವರದಿಯಾಗಿದೆ.
ಆದರೆ ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿವರಣೆ ನೀಡಿರುವ ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ, 'ಆರ್‌ಸಿಬಿ ಫ್ರಾಂಚೈಸಿಯ ವಾಣಿಜ್ಯ ಒಪ್ಪಂದ ನವೀಕರಿಸದಿರಲು ವಿರಾಟ್ ಕೊಹ್ಲಿ ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಆದರೆ ಇದರ ಅರ್ಥ ಅವರು ಆರ್‌ಸಿಬಿ ತಂಡವನ್ನು ತೊರೆಯುತ್ತಾರೆ ಎಂದಲ್ಲ. ವಿರಾಟ್ ಕೊಹ್ಲಿ ಮುಂದಿನ ಆವೃತ್ತಿಯಲ್ಲೂ ಆರ್‌ಸಿಬಿ ತಂಡದಲ್ಲಿ ಮುಂದುವರಿಯುವ ಸಾಧ್ಯತೆ ಇದೆ' ಎಂದು ತಿಳಿಸಿದ್ದಾರೆ.
'ವಿರಾಟ್ ಕೊಹ್ಲಿ ಆರ್‌ಸಿಬಿಯ ವಾಣಿಜ್ಯ ಒಪ್ಪಂದವನ್ನು ನಿರಾಕರಿಸಿದ್ದರೆಂದು ವರದಿಯಾಗಿದೆ. ಅದರ ಅರ್ಥವೇನು? ಅವರು ಖಂಡಿತವಾಗಿಯೂ ಆರ್‌ಸಿಬಿ ಪರ ಆಡುತ್ತಾರೆ. ಒಂದು ವೇಳೆ ಆಡುವುದಾದರೆ ಖಂಡಿತವಾಗಿಯೂ ಆರ್‌ಸಿಬಿ ಪರ ಆಡುತ್ತಾರೆ' ಎಂದಿದ್ದಾರೆ.
'ಕೊಹ್ಲಿ ಈಗಷ್ಟೇ ಟ್ರೋಫಿ ಗೆದ್ದಿದ್ದಾರೆ. ಮತ್ತೆ ಫ್ರಾಂಚೈಸಿ ಏಕೆ ತೊರೆಯುತ್ತಾರೆ? ವಾಣಿಜ್ಯ ಒಪ್ಪಂದವು ಕ್ರಿಕೆಟ್‌ಯೇತರ ಒಪ್ಪಂದವಾಗಿದೆ' ಎಂದು ಅವರು ವಿವರಿಸಿದ್ದಾರೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್‌ನ 2025ನೇ ಸಾಲಿನಲ್ಲಿ ಆರ್‌ಸಿಬಿ ಚೊಚ್ಚಲ ಕಿರೀಟ ಗೆದ್ದಿತ್ತು. ಕಳೆದ 18 ವರ್ಷಗಳಲ್ಲಿ ತಂಡದ ಅವಿಭಾಜ್ಯ ಅಂಗವಾಗಿರುವ ವಿರಾಟ್, ಈ ಹಿಂದೆ ನಾಯಕರಾಗಿಯೂ ತಂಡವನ್ನು ಮುನ್ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.