ಮಥುರಾದ ವೃಂದಾವನದಲ್ಲಿರುವ ಧರ್ಮಗುರು ಪ್ರೇಮಾನಂದ ಜಿ ಮಹಾರಾಜ್ ಅವರನ್ನು ಮಂಗಳವಾರ ಭೇಟಿಯಾದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ
–ಪಿಟಿಐ ಚಿತ್ರ
ಮಥುರಾ: ಸೋಮವಾರವಷ್ಟೇ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಭಾರತ ತಂಡದ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಮಂಗಳವಾರ ವೃಂದಾವನದ ಧರ್ಮಗುರು ಪ್ರೇಮಾನಂದ ಗೋವಿಂದ ಶರಣ ಜೀ ಮಹಾರಾಜ್ ಅವರನ್ನು ಭೇಟಿಯಾದರು.
ವಿರಾಟ್ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರು ಪ್ರೇಮಾನಂದಜೀ ಅವರಿಂದ ಆಶೀರ್ವಾದ ಪಡೆಯುತ್ತಿರುವ ವಿಡಿಯೊ ತುಣುಕನ್ನು ‘ಎಕ್ಸ್’ನಲ್ಲಿ ಹಾಕಲಾಗಿದೆ.
'ಸಂತೋಷವಾಗಿದ್ದೀರಾ’ ಎಂದು ಪ್ರೇಮಾನಂದಜೀ ಅವರು ಕೊಹ್ಲಿ ದಂಪತಿಯ ಕುಶಲೋಪರಿಯನ್ನು ಕೇಳಿದ್ದಾರೆ.
ವರಾಹ ಘಾಟ್‌ನಲ್ಲಿರುವ ಶ್ರೀ ರಾಧಾ ಕೇಲಿಕುಂಜ್ ಆಶ್ರಮದಲ್ಲಿ ಸುಮಾರು ಮೂರು ಗಂಟೆಗಳವರೆಗೆ ಕೊಹ್ಲಿ ದಂಪತಿ ಇದ್ದರು. ಇಲ್ಲಿಗೆ ಸಮೀಪದ ಗೌರಂಗಿ ಶರಣ್ ಮಹಾರಾಜ್ ಆಶ್ರಮಕ್ಕೂ ಭೇಟಿ ನೀಡಿದ್ದರು.
ಕೊಹ್ಲಿ ಅವರು ಈ ಸ್ಥಳಕ್ಕೆ ಭೇಟಿ ನೀಡುತ್ತಿರುವುದು ಇದು ಮೂರನೇ ಸಲ. 2023ರ ಜನವರಿ 4 ಮತ್ತು ಈ ವರ್ಷದ ಜನವರಿ 10ರಂದೂ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.