ADVERTISEMENT

R Ashwin | 31ನೇ ಸಲ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಕಬಳಿಸಿದ ಆರ್. ಅಶ್ವಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಫೆಬ್ರುವರಿ 2023, 13:05 IST
Last Updated 11 ಫೆಬ್ರುವರಿ 2023, 13:05 IST
ಆರ್‌. ಅಶ್ವಿನ್‌ (ಪಿಟಿಐ)
ಆರ್‌. ಅಶ್ವಿನ್‌ (ಪಿಟಿಐ)   

ನಾಗ್ಪುರ: ಭಾರತ ಕ್ರಿಕೆಟ್‌ ತಂಡದ ಪ್ರಮುಖ ಸ್ಪಿನ್ನರ್‌ ಆರ್‌. ಅಶ್ವಿನ್‌ ಅವರು ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಟೆಸ್ಟ್‌ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿದ್ದಾರೆ. ಆ ಮೂಲಕ ಟೆಸ್ಟ್‌ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ 31ನೇ ಬಾರಿಗೆ ಈ ಸಾಧನೆ ಮಾಡಿದ ಶ್ರೇಯಕ್ಕೆ ಭಾಜನರಾದರು.

ನಗರದಲ್ಲಿರುವ 'ವಿದರ್ಭ ಕ್ರಿಕೆಟ್ ಸಂಸ್ಥೆ' ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 177 ರನ್‌ ಗಳಿಸಿ ಆಲೌಟ್‌ ಆಗಿತ್ತು. ಇದಕ್ಕುತ್ತರವಾಗಿ ಭಾರತ ತಂಡ 400 ರನ್‌ ಕಲೆಹಾಕಿತ್ತು. 228 ರನ್‌ಗಳ ಹಿನ್ನಡೆಯೊಂದಿಗೆ ಮೂರನೇ ದಿನ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ 91 ರನ್‌ ಗಳಿಸಿ ಆಲೌಟ್‌ ಆಗುವುದರೊಂದಿಗೆ ಇನಿಂಗ್ಸ್‌ ಹಾಗೂ 132 ರನ್‌ ಅಂತರದ ಸೋಲೊಪ್ಪಿಕೊಂಡಿದೆ.

ಸ್ಪಿನ್ ಬಲೆ ಎಣೆದ ಆರ್‌.ಅಶ್ವಿನ್‌ ಐದು ವಿಕೆಟ್‌ ಕಿತ್ತರೆ, ರವೀಂದ್ರ ಜಡೇಜ 2 ಹಾಗೂ ಅಕ್ಷರ್ ಪಟೇಲ್‌ 1 ವಿಕೆಟ್‌ ಉರುಳಿಸಿದರು. ಇನ್ನೆರಡು ವಿಕೆಟ್‌ಗಳು ವೇಗಿ ಮೊಹಮ್ಮದ್ ಶಮಿ ಪಾಲಾದವು.

ADVERTISEMENT

ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ಬಾರಿ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್‌ ಸಾಧನೆ ಮಾಡಿದ ಹತ್ತು ಬೌಲರ್‌ಗಳು

ಬೌಲರ್‌ ದೇಶ ಪಂದ್ಯ ಇನಿಂಗ್ಸ್‌ ಒಟ್ಟು ವಿಕೆಟ್‌ 5 ವಿಕೆಟ್‌ ಸಾಧನೆ
ಮತ್ತಯ್ಯ ಮುರುಳೀಧರನ್ ಶ್ರೀಲಂಕಾ 133 230 800 67 ಬಾರಿ
ಶೇನ್‌ ವಾರ್ನ್ ಆಸ್ಟ್ರೇಲಿಯಾ 145 273 708 37 ಬಾರಿ
ರಿಚರ್ಡ್‌ ಹಡ್ಲೀ ನ್ಯೂಜಿಲೆಂಡ್ 86 150 431 36 ಬಾರಿ
ಅನಿಲ್‌ ಕುಂಬ್ಳೆ ಭಾರತ 132 236 619 35 ಬಾರಿ
ರಂಗನಾ ಹೆರಾತ್‌ ಶ್ರೀಲಂಕಾ 93 170 433 34 ಬಾರಿ
ಜೇಮ್ಸ್‌ ಆ್ಯಂಡರ್ಸನ್‌ ಇಂಗ್ಲೆಂಡ್ 177 329 675 32 ಬಾರಿ
ಆರ್‌.ಅಶ್ವಿನ್‌ ಭಾರತ 89 168 457 31 ಬಾರಿ
ಗ್ಲೆನ್‌ ಮೆಗ್ರಾತ್‌ ಆಸ್ಟ್ರೇಲಿಯಾ 124 243 563 29 ಬಾರಿ
ಇಯಾನ್‌ ಬಾಥಮ್‌ ಇಂಗ್ಲೆಂಡ್ 102 168 383 27 ಬಾರಿ
ಡೇಲ್‌ ಸ್ಟೇಯ್ನ್‌ ದಕ್ಷಿಣ ಆಫ್ರಿಕಾ 93 171 439 26 ಬಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.