ತಿರುವನಂತಪುರ: ಇಲ್ಲಿನ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಟಿ20 ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಆರಂಭಿಕ ದಾಂಡಿಗರಾಗಿರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಕ್ರೀಸ್‌ಗಿಳಿದಿದ್ದು, 3ನೇ ಓವರ್‌ನಲ್ಲಿ ಪರೇರಾ ಎಸೆತಕ್ಕೆ ರಾಹುಲ್ (11 ರನ್) ಔಟಾಗಿದ್ದಾರೆ.
ರೋಹಿತ್ ಶರ್ಮಾ ಮತ್ತು ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಶಿವಂದುಬೆಉತ್ತಮ ಜತೆಯಾಟ ಪ್ರದರ್ಶಿಸಿದ್ದರೂ 8ನೇ ಓವರ್‌ನಲ್ಲಿ ರೋಹಿತ್ (15 ರನ್) ಜೇಸನ್ ಹೋಲ್ಡರ್‌ಗೆವಿಕೆಟ್ ಒಪ್ಪಿಸಿದರು.
ಶಿವಂ ದುಬೆ ಅರ್ಧ ಶತಕ ಸಿಡಿಸಿ ಟೀಂ ಇಂಡಿಯಾದ ರನ್ ಏರಿಸುವಲ್ಲಿ ನೆರವಾದರು. ಆದರೆ 11ನೇ ಓವರ್‌ನಲ್ಲಿ ವಾಲ್ಶ್ ಎಸೆತಕ್ಕೆಶಿಮ್ರೊನ್ ಹೆಟ್ಮೆಯರ್‌ಗೆ ಕ್ಯಾಚಿತ್ತು ದುಬೆ ಔಟಾದರು.
ವಿರಾಟ್ ಕೊಹ್ಲಿ ಮತ್ತು ಪಂತ್ ಕ್ರೀಸ್‌ನಲ್ಲಿದ್ದು ಭಾರತ ಮೂರು ವಿಕೆಟ್ ನಷ್ಟಕ್ಕೆ 106ರನ್ ಗಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.