ADVERTISEMENT

ಧೋನಿ, ಧವನ್‌ ದೇಶಿ ಕ್ರಿಕೆಟ್‌ನಲ್ಲಿ ಆಡುತ್ತಿಲ್ಲವೇಕೆ?: ಸುನಿಲ್ ಗಾವಸ್ಕರ್

ಪಿಟಿಐ
Published 6 ಡಿಸೆಂಬರ್ 2018, 17:31 IST
Last Updated 6 ಡಿಸೆಂಬರ್ 2018, 17:31 IST
ಸುನಿಲ್ ಗಾವಸ್ಕರ್
ಸುನಿಲ್ ಗಾವಸ್ಕರ್   

ನವದೆಹಲಿ: ಶಿಖರ್‌ ಧವನ್‌ ಮತ್ತು ಮಹೇಂದ್ರ ಸಿಂಗ್‌ ಧೋನಿ ಅವರನ್ನು ಪ್ರಥಮ ದರ್ಜೆ ಕ್ರಿಕೆಟ್‌ ಟೂರ್ನಿಗಳಲ್ಲಿ ಏಕೆ ಆಡುತ್ತಿಲ್ಲ ಎಂದು ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಪ್ರಶ್ನಿಸಿದ್ದಾರೆ.

ಆಸ್ಟ್ರೇಲಿಯಾ ಎದುರಿನ ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಭಾರತ ತಂಡದಲ್ಲಿ ಶಿಖರ್ ಧವನ್ ಸ್ಥಾನ ಪಡೆದಿಲ್ಲ. ಆವರು ತಮ್ಮ ಕುಟುಂಬದೊಂದಿಗೆ ಮೆಲ್ಬರ್ನ್‌ನಲ್ಲಿ ರಜೆ ಕಳೆಯುತ್ತಿದ್ದಾರೆ. ಧೋನಿ ಅವರು ನವೆಂಬರ್‌ನಲ್ಲಿ ನಡೆದ ವೆಸ್ಟ್ ಇಂಡೀಸ್‌ ಎದುರಿನ ಏಕದಿನ ಪಂದ್ಯದಲ್ಲಿ ಆಡಿದ್ದರು. ಅದಾದ ನಂತರ ಯಾವುದೇ ಪಂದ್ಯಗಳಲ್ಲಿ ಅವರು ಆಡಿಲ್ಲ. ಧೋನಿ ಅವರನ್ನು 50 ಓವರ್‌ ಪಂದ್ಯಗಳಿಗೆ ಮೀಸಲಾಗಿದ್ದಾರೆ. ವೆಸ್ಟ್‌ ಇಂಡೀಸ್‌ ಹಾಗೂ ಆಸ್ಟ್ರೇಲಿಯಾ ಎದುರಿನ ಟ್ವೆಂಟಿ–20 ಸರಣಗಳಲ್ಲಿ ಅವರನ್ನು ಕೈಬಿಡಲಾಗಿತ್ತು. ಧೋನಿ ಅವರು 2014ರಲ್ಲಿ ಟೆಸ್ಟ್‌ ಪಂದ್ಯಗಳಿಂದ ನಿವೃತ್ತಿ ಹೊಂದಿದ್ದಾರೆ.

‘ಭಾರತ ತಂಡವು ಉತ್ತಮವಾಗಿ ಆಡಬೇಕೆಂದರೆ ಆಟಗಾರರು ಫಿಟ್‌ ಆಗಿರಬೇಕು. ಅದಕ್ಕಾಗಿ ಅವರು ಕ್ರಿಕೆಟ್‌ ಪಂದ್ಯಗಳಲ್ಲಿ ಆಡುವುದು ಮುಖ್ಯ’ ಎಂದು ಗಾವಸ್ಕರ್ ಅವರು ಈಚೆಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.

ADVERTISEMENT

‘ಈಗ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಈ ಇಬ್ಬರೂ ಆಟಗಾರರು ಆಡಬೇಕು. ಅದರಲ್ಲೂ ಬ್ಯಾಂಟಿಂಗ್ ಬಗ್ಗೆ ತೀವ್ರ ಟೀಕೆ ಎದುರಿಸುತ್ತಿರುವ ಧೋನಿ ತಮ್ಮ ಲಯಕ್ಕೆ ಮರಳಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.