ADVERTISEMENT

ಡೆಲ್ಲಿ ವಿರುದ್ಧದ ಜಯ ಯಾವುದೇ ‌ಸಂದರ್ಭದಲ್ಲಿ ಗೆಲ್ಲುವ ವಿಶ್ವಾಸ ನೀಡಿದೆ: ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಅಕ್ಟೋಬರ್ 2021, 4:56 IST
Last Updated 9 ಅಕ್ಟೋಬರ್ 2021, 4:56 IST
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ
ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ   

ದುಬೈ: ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಶುಕ್ರವಾರ ನಡೆದ ಪಂದ್ಯದಲ್ಲಿ ಸಿಕ್ಕ ಗೆಲುವು, ಯಾವುದೇ ಸಂದರ್ಭದಲ್ಲಿಯೂಜಯದ ಹಳಿಗೆ ಮರಳುವ ವಿಶ್ವಾಸವನ್ನು ತಂದುಕೊಟ್ಟಿದೆ ಎಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಪಡೆಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆಯಿತು. ನಿಗದಿತ20 ಓವರ್‌ಗಳಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು164ರನ್ ಕಲೆಹಾಕಿತ್ತು.

ಈ ಸವಾಲಿನ ಗುರಿ ಬೆನ್ನತ್ತಿದ ಕೊಹ್ಲಿ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ನಾಯಕನೊಟ್ಟಿಗೆ ಇನಿಂಗ್ಸ್‌ ಆರಂಭಿಸಿದ ಕನ್ನಡಿಗ ಪಡಿಕ್ಕಲ್‌ ಖಾತೆ ತೆರೆಯದೆ ಪೆವಿಲಿಯನ್‌ ಸೇರಿಕೊಂಡರು. ಕೊಹ್ಲಿ ಕೂಡ ಕೇವಲ4 ರನ್‌ ಗಳಿಸಿ ವಿಕೆಟ್‌ ಕೈ ಚೆಲ್ಲಿದರು. ಇವರಿಬ್ಬರೂ ಔಟಾದಾಗ ತಂಡದ ಮೊತ್ತ ಕೇವಲ6 ರನ್.

ADVERTISEMENT

ಈ ವೇಳೆ ಜೊತೆಯಾದ ಶ್ರೀಕರ್‌ ಭರತ್‌ ಮತ್ತು ಅನುಭವಿ ಎಬಿ ಡಿ ವಿಲಿಯರ್ಸ್‌ ಮೂರನೇ ವಿಕೆಟ್‌ ಜೊತೆಯಾಟದಲ್ಲಿ49 ರನ್‌ ಸೇರಿಸಿ ಅಲ್ಪ ಚೇತರಿಕೆ ನೀಡಿದರು. ವಿಲಿಯರ್ಸ್‌ ವಿಕೆಟ್‌ ಪತನದ ಬಳಿಕ ಬಂದ ಗ್ಲೇನ್‌ ಮ್ಯಾಕ್ಸ್‌ವೆಲ್‌ ಪಂದ್ಯದ ಗತಿ ಬದಲಿಸುವ ಆಟವಾಡಿದರು.

ಭರತ್-ಮ್ಯಾಕ್ಸ್‌ವೆಲ್‌‌ ಶತಕದ ಜೊತೆಯಾಟ
ತಂಡ ಗೆಲ್ಲಲು ಇನ್ನು63 ಎಸೆತಗಳಲ್ಲಿ ನೂರು ರನ್‌ ಬೇಕಿದ್ದಾಗ ಜೊತೆಯಾದ ಮ್ಯಾಕ್ಸ್‌ವೆಲ್‌‌ ಮತ್ತು ಭರತ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಆದಾಗ್ಯೂ ಕೊನೆಯ ಓವರ್‌ನಲ್ಲಿ 15 ರನ್‌ಗಳ ಅಗತ್ಯವಿತ್ತು.

ಆವೇಶ್‌ ಖಾನ್ ಎಸೆತದ ಅಂತಿಮಓವರ್‌ನಮೊದಲ ಐದು ಎಸೆತಗಳಲ್ಲಿಈ ಜೋಡಿ 10 ರನ್‌ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಕೊನೇ ಎಸೆತದಲ್ಲಿ5 ರನ್‌ ಗಳಿಸಬೇಕಾದ ಸವಾಲು ಎದುರಾಯಿತು. ಆದರೆ, ಕೊನೆಯ ಎಸೆತವನ್ನುಸಿಕ್ಸರ್‌ಗೆ ಅಟ್ಟಿದ ಭರತ್ ಆರ್‌ಸಿಬಿಗೆ ಏಳು ವಿಕೆಟ್‌ಗಳ ಗೆಲುವು ದಕ್ಕಿಸಿಕೊಟ್ಟರು.

52 ಎಸೆತಗಳನ್ನು ಎದುರಿಸಿದ ಭರತ್‌4 ಸಿಕ್ಸರ್‌ ಮತ್ತು3 ಬೌಂಡರಿ ಸಹಿತ78 ರನ್‌ ಗಳಿಸಿದರೆ, ಮ್ಯಾಕ್ಸ್‌ವೆಲ್‌33 ಎಸೆತಗಳಿಂದ8 ಬೌಂಡರಿ ಬಾರಿಸಿ51 ರನ್‌ ಸಿಡಿಸಿ ಅಜೇಯವಾಗಿ ಉಳಿದರು. ನಾಲ್ಕನೇ ವಿಕೆಟ್‌ಗೆ ಜೊತೆಯಾಟದಲ್ಲಿ ಇವರಿಬ್ಬರ ಬ್ಯಾಟ್‌ಗಳಿಂದ ಅಜೇಯ111 ರನ್‌ ಹರಿದುಬಂದವು.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ʼನಂಬಲಸಾಧ್ಯವಾದ ಪಂದ್ಯ. ನಮಗೆ ಕಳೆದುಕೊಳ್ಳುವಂತಹದ್ದೇನೂ ಇರಲಿಲ್ಲ. ಆದರೆ, ಇದು ಐಪಿಎಲ್‌ನಲ್ಲಿ ಯಾವಾಗಲೂ ನಡೆಯುವಂತಹ ಸ್ಪರ್ಧಾತ್ಮಕ ಪಂದ್ಯವೇ ಆಗಿದೆ.ಪಂದ್ಯವನ್ನು ಯಾವುದೇ ಪರಿಸ್ಥಿತಿಯಲ್ಲೂಹಿಡಿತಕ್ಕೆ ಪಡೆಯುವವಿಶ್ವಾಸವನ್ನು ಮೂಡಿಸಿದೆʼ ಎಂದು ಹೇಳಿದ್ದಾರೆ.

ಶ್ರೀಕರ್‌ ಭರತ್‌ ಮತ್ತು ಗ್ಲೇನ್‌ ಮ್ಯಾಕ್ಸ್‌ವೆಲ್‌

ವಿಕೆಟ್‌ಗಳನ್ನು ಕಳೆದುಕೊಂಡಾಗಲೂ, ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಕ್ರಮಾಂಕದಲ್ಲಿರುವ ತಂಡವನ್ನು ಮಣಿಸುವುದು ಉತ್ತಮ ಭಾವನೆ ಮೂಡಿಸುತ್ತದೆ. ಆರಂಭದಲ್ಲಿ ವಿಲಿಯರ್ಸ್‌ ಬ್ಯಾಟಿಂಗ್‌ ಮಾಡಿದ ರೀತಿ ಮತ್ತುಕೊನೆಯಲ್ಲಿ ಭರತ್‌ ಹಾಗೂ ಮ್ಯಾಕ್ಸ್‌ವೆಲ್‌ ಆಡಿದ ರೀತಿ ನಂಬಲಸಾಧ್ಯವಾದುದುʼ‌ ಎಂದು ಹೇಳಿಕೊಂಡಿದ್ದಾರೆ.

ಭರತ್‌ ಅವರಅದ್ಭುತ ಪ್ರದರ್ಶನದೊಂದಿಗೆ ತಂಡದ ಮೂರನೇ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದೂ ತಿಳಿಸಿದ್ದಾರೆ.

ಫೈನಲ್‌ ದಾರಿ
ಡೆಲ್ಲಿ ತಂಡ ಐಪಿಎಲ್‌-2021ರ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದು, ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಚೆನ್ನೈ ಸೂಪರ್‌ಕಿಂಗ್ಸ್‌ ಎರಡನೇ ಮತ್ತು ಕೊಲ್ಕತ್ತಾ ನೈಟ್‌ ರೈಡರ್ಸ್‌ ನಾಲ್ಕನೇ ಸ್ಥಾನಗಳಲ್ಲಿವೆ.

ಅಕ್ಟೋಬರ್ 10 ರಂದು (ಭಾನುವಾರ) ದುಬೈಯಲ್ಲಿ ನಡೆಲಿರುವ ಮೊದಲ ಕ್ವಾಲಿಫೈಯರ್‌‌ನಲ್ಲಿ ಡೆಲ್ಲಿ ಮತ್ತು ಚೆನ್ನೈ ಸೆಣಸಾಟ ನಡೆಸಲಿವೆ.

ಅಕ್ಟೋಬರ್ 11ರಂದು (ಸೋಮವಾರ) ಶಾರ್ಜಾದಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಬೆಂಗಳೂರು ತಂಡವು ಕೋಲ್ಕತ್ತವಿರುದ್ಧ ಕಣಕ್ಕಿಳಿಯಲಿದೆ.

ಮೊದಲ ಕ್ವಾಲಿಫೈಯರ್‌‌ ಗೆಲ್ಲುವ ತಂಡ ಫೈನಲ್‌ ತಲುಪಿದರೆ, ಸೋಲುವ ತಂಡಎಲಿಮಿನೇಟರ್ ಪಂದ್ಯದ ವಿಜಯಿಯೊಂದಿಗೆ ಫೈನಲ್‌ ಟಿಕೆಟ್‌ಗಾಗಿಅಕ್ಟೋಬರ್ 13ರಂದು (ಬುಧವಾರ) ಶಾರ್ಜಾದಲ್ಲಿ ಪೈಪೋಟಿ ನಡೆಸಲಿದೆ.

ಫೈನಲ್‌ ಪಂದ್ಯ ಅಕ್ಟೋಬರ್‌ 15 ರಂದು (ಶುಕ್ರವಾರ) ದುಬೈನಲ್ಲಿ ನಡೆಯಲಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.