ADVERTISEMENT

ಮಹಿಳಾ ವಿಶ್ವಕ‍ಪ್ ಗೆಲುವು: ಆಟಗಾರ್ತಿಯರ ಬ್ರ್ಯಾಂಡ್ ಮೌಲ್ಯದಲ್ಲಿ ಭಾರಿ ಏರಿಕೆ

ಪಿಟಿಐ
Published 8 ನವೆಂಬರ್ 2025, 10:03 IST
Last Updated 8 ನವೆಂಬರ್ 2025, 10:03 IST
<div class="paragraphs"><p>ಮಹಿಳಾ ವಿಶ್ವಕಪ್ ವಿಜೇತ ತಂಡ</p></div>

ಮಹಿಳಾ ವಿಶ್ವಕಪ್ ವಿಜೇತ ತಂಡ

   

ಚಿತ್ರ: ಬಿಸಿಸಿಐ

ನವದೆಹಲಿ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಚೊಚ್ಚಲ ಟ್ರೋಫಿ ಗೆದ್ದ ಭಾರತ ಮಹಿಳಾ ತಂಡದ ಆಟಗಾರ್ತಿಯರು ತಮ್ಮ ಬ್ರ್ಯಾಂಡ್ ಮೌಲ್ಯ ಹೆಚ್ಚಿಸಿಕೊಂಡಿದ್ದಾರೆ.

ADVERTISEMENT

ಸ್ಮೃತಿ ಮಂಧಾನ, ಶಫಾಲಿ ವರ್ಮಾ ಮತ್ತು ಜೆಮಿಮಾ ರಾಡ್ರಿಗಸ್‌ರಂತಹ ತಾರಾ ಆಟಗಾರ್ತಿಯರ ಮಾರುಕಟ್ಟೆ ಮೌಲ್ಯ ಶೇ 50ಕ್ಕಿಂತ ಹೆಚ್ಚಾಗುವ ನಿರೀಕ್ಷೆಯಿದೆ. ಆಟಗಾರ್ತಿಯರನ್ನು ಆಟಗಾರ್ತಿಯನ್ನು ನಿರ್ವಹಿಸುವ ಸಂಸ್ಥೆಗಳ ಪ್ರಕಾರ, ಆಟಗಾರ್ತಿಯರ ಬ್ರ್ಯಾಂಡ್ ಮೌಲ್ಯ ₹1 ಕೋಟಿಗೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಆಟೋಮೊಬೈಲ್ ಕಂಪನಿಗಳಿಂದ ಹಿಡಿದು ಬ್ಯಾಂಕುಗಳವರೆಗೆ ಮತ್ತು ಶಿಕ್ಷಣ ಸಂಸ್ಥೆಗಳು, ಜೀವನಶೈಲಿಗೆ ಸಂಬಂಧಿಸಿದ ಸೌಂದರ್ಯವರ್ಧಕಗಳು ಮತ್ತು ಶಿಕ್ಷಣ ಸಂಸ್ಥೆಗಳ ಪ್ರಚಾರಕ್ಕೆ ಒಪ್ಪಂದ ಮಾಡಿಕೊಳ್ಳಲು ಅನೇಕ ಸಂಸ್ಥೆಗಳು ಕಾಯುತ್ತಿವೆ.

ಪಿಟಿಐ ಕೇಳಿದ ಪ್ರಶ್ನೆಗಳಿಗೆ ಮಂದಾನ, ರಿಚಾ ಘೋಷ್ ಮತ್ತು ರಾಧಾ ಯಾದವ್ ಅವರನ್ನು ನಿರ್ವಹಿಸುವ ಬೇಸ್‌ಲೈನ್ ವೆಂಚರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ತುಹಿನ್ ಮಿಶ್ರಾ ಹಾಗೂ ಶಫಾಲಿ ವರ್ಮಾ ಮತ್ತು ಜೆಮಿಮಾ ಅವರನ್ನು ನಿರ್ವಹಿಸುವ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಕರಣ್ ಯಾದವ್ ಪ್ರತಿಕ್ರಿಯಿಸಿದ್ದಾರೆ.

‘ನಾವು ಸಣ್ಣ ‍ಪ್ರಮಾಣದ ಏರಿಕೆ ಕಾಣುತ್ತಿದ್ದೇವೆ. ದೊಡ್ಡ ಮಟ್ಟದ ಒಪ್ಪಂದಗಳ ಮೌಲ್ಯ 2 ರಿಂದ 3 ಪಟ್ಟು ಹೆಚ್ಚಾಗಿವೆ. ಜೆಮಿಮಾ ಅವರ ಬ್ರ್ಯಾಂಡ್ ಮೌಲ್ಯ ಸುಮಾರು ₹60 ಲಕ್ಷದಿಂದ ₹1.5 ಕೋಟಿಗೆ ಏರಿಕೆ ಕಂಡಿದೆ. ಶಫಾಲಿ ಸುಮಾರು ₹40 ಲಕ್ಷದಿಂದ ₹1 ಕೋಟಿಗೆ ಏರಿದ್ದಾರೆ’ ಎಂದು ಯಾದವ್ ಹೇಳಿದರು.

‘ನಾವು ತಾರಾ ಆಟಗಾರ್ತಿಯರ ಬ್ರ್ಯಾಂಡ್ ಮೌಲ್ಯ ಶೇ 25 ರಿಂದ 55 ರಷ್ಟು ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದೇವೆ. ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯರಿಗೆ ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು’ ಎಂದು ಮಿಶ್ರಾ ಹೇಳಿದರು.

‘ಈ ವಿಶ್ವಕಪ್ ಗೆಲುವು ಮಾರುಕಟ್ಟೆಯಲ್ಲಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಮೌಲ್ಯವನ್ನು ನಿಜವಾಗಿಯೂ ಹೆಚ್ವು ಮಾಡುತ್ತದೆ. ಈ ಸಂದರ್ಭದಲ್ಲಿ ಸಂಸ್ಥೆಗಳು ಅಲ್ಪಾವಧಿಯ ಪ್ರಚಾರಕ್ಕಿಂತ ದೀರ್ಘಾವಧಿಯ ಒಪ್ಪಂದ ಮಾಡಿಕೊಳ್ಳಲು ಎದುರು ನೋಡುತ್ತವೆ’ ಎಂದು ಅವರು ಹೇಳಿದರು.

ಇದು ಕೇವಲ ಟ್ರೋಫಿ ಗೆದ್ದಿದ್ದರಿಂದ ಮಾತ್ರ ಆಗಿದ್ದಲ್ಲ. ಅವರು ಸಾರ್ವಜನಕವಾಗಿ ಕಾಣಿಸಿಕೊಳ್ಳುವುದು, ಭಾಗವಹಿಸುವಿಕೆ, ಸಾಂಸ್ಕೃತಿಕ ವ್ಯಾಪ್ತಿ ಮತ್ತು ಪ್ರೇಕ್ಷಕರ ಜೊತೆ ಅವರು ಕಾಣಿಸಿಕೊಳ್ಳುವುದು ಈ ಎಲ್ಲಾ ಅಂಶಗಳಿಂದ ಸಾಧ್ಯವಾಗಿದೆ’ ಎಂದರು.

ಪ್ರಸ್ತುತ ದಿನಗಳಲ್ಲಿ ಮಹಿಳಾ ಕ್ರಿಕೆಟರ್‌ಗಳು ಪುರುಷ ಆಟಗಾರರು ನೀಡುತ್ತಿದ್ದ ಜಾಹಿರಾತು ಸಂಸ್ಥೆಗಳ ಜೊತೆ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣ, ಅವರನ್ನು ಅನುಸರಿಸುತ್ತಿದ್ದವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು.

‘ಉದಾಹರಣೆಗೆ ಸ್ಮೃತಿ ಮಂದಾನ ಹ್ಯುಂಡೇ, ಗಲ್ಫ್ ಆಯಿಲ್, ಎಸ್‌ಬಿಐ ಬ್ಯಾಂಕ್, ಪಿಎನ್‌ಬಿ ಮೆಟ್‌ಲೈಫ್ ಮುಂತಾದ ಬ್ರಾಂಡ್‌ಗಳೊಂದಿಗೆ ಒಪ್ಪಂದ ಹೊಂದಿದ್ದಾರೆ. ಇವು ಸಾಂಪ್ರದಾಯಿಕವಾಗಿ ಪುರುಷ ಪ್ರಾಬಲ್ಯದ ಸಂಸ್ಥೆಗಳು ಎಂದು ಅವರು ಮಿಶ್ರಾ ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.