ADVERTISEMENT

Commonwealth Games ಟಿ20 ಕ್ರಿಕೆಟ್: ಹರ್ಮನ್ ಪಡೆಗೆ ಶುಭಾರಂಭದ ನಿರೀಕ್ಷೆ

ಕ್ರಿಕೆಟ್‌: ಭಾರತ ಮಹಿಳಾ ತಂಡಕ್ಕೆ ಬಲಿಷ್ಠ ಆಸ್ಟ್ರೇಲಿಯಾ ಸವಾಲು

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 14:08 IST
Last Updated 28 ಜುಲೈ 2022, 14:08 IST
ಹರ್ಮನ್‌ಪ್ರೀತ್ ಕೌರ್– ಪಿಟಿಐ ಚಿತ್ರ
ಹರ್ಮನ್‌ಪ್ರೀತ್ ಕೌರ್– ಪಿಟಿಐ ಚಿತ್ರ   

ಬರ್ಮಿಂಗ್‌ಹ್ಯಾಮ್‌: 24 ವರ್ಷಗಳ ಬಳಿಕ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಕ್ರಿಕೆಟ್‌ ಮರುಸೇರ್ಪೆಯಾಗಿದ್ದು, ಭಾರತ ಮಹಿಳಾ ತಂಡವು ಟಿ20 ಮಾದರಿಯಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಸವಾಲು ಎದುರಿಸಲಿದೆ.

ಎಜ್‌ಬಾಸ್ಟನ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯುವ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಗೆಲುವಿನ ಭರವಸೆಯಲ್ಲಿದೆ.

1998ರ ಕ್ವಾಲಾಲಂಪುರ ಕೂಟದಲ್ಲಿ ಪುರುಷರ 50 ಓವರ್‌ಗಳ ಪಂದ್ಯಗಳನ್ನು ಆಡಿಸಲಾಗಿತ್ತು. ಆ ಬಳಿಕ ಕ್ರಿಕೆಟ್‌ ನಡೆದಿರಲಿಲ್ಲ.

ADVERTISEMENT

ಭಾರತ ತಂಡವು ಇತ್ತೀಚೆಗೆ ಶ್ರೀಲಂಕಾ ಎದುರಿನ ಟಿ20 ಸರಣಿಯನ್ನು 2–1ರಿಂದ ಗೆದ್ದುಕೊಂಡು ಆತ್ಮವಿಶ್ವಾಸದಲ್ಲಿದೆ. ದ್ವೀಪರಾಷ್ಟ್ರದ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನೂ ಹರ್ಮನ್‌ಪ್ರೀತ್ ಬಳಕ 3–0ಯಿಂದ ಕ್ಲೀನ್‌ಸ್ವೀಪ್ ಮಾಡಿತ್ತು. ಅದೇ ಲಯದೊಂದಿಗೆ ಆಸ್ಟ್ರೇಲಿಯಾ ತಂಡವನ್ನು ಮಣಿಸುವ ಭರವಸೆಯಲ್ಲಿದೆ.

ಜೆಮಿಮಾ ರಾಡ್ರಿಗಸ್‌, ಶೆಫಾಲಿ ವರ್ಮಾ ಅವರನ್ನೊಳಗೊಂಡಿರುವ ಬಲಿಷ್ಠ ಬ್ಯಾಟಿಂಗ್ ಪಡೆಯಿದೆ. ಪೂನಂ ಯಾದವ್‌ ಮತ್ತು ರಾಧಾ ಯಾದವ್‌ ಬೌಲಿಂಗ್‌ನಲ್ಲಿ ಪರಿಣಾಮಕಾರಿ ಎನಿಸಬಲ್ಲರು.

ಮೆಗ್‌ ಲ್ಯಾನಿಂಗ್ ನಾಯಕತ್ವದ ಆಸ್ಟ್ರೇಲಿಯಾ ಕೂಡ ಬಲಿಷ್ಠವಾಗಿದ್ದು, ಹರ್ಮನ್‌ಪ್ರೀತ್ ಪಡೆಗೆ ಸೋಲುಣಿಸುವ ಲೆಕ್ಕಾಚಾರದಲ್ಲಿದೆ.

ತಂಡಗಳು
ಭಾರತ:
ಹರ್ಮನ್‌ಪ್ರೀತ್ ಕೌರ್‌ (ನಾಯಕಿ), ಸ್ಮೃತಿ ಮಂದಾನ, ತಾನಿಯಾ ಭಾಟಿಯಾ, ಯಷ್ಟಿಕಾ ಭಾಟಿಯಾ, ಹರ್ಲೀನ್ ಡಿಯೊಲ್‌, ರಾಜೇಶ್ವರಿ ಗಾಯಕವಾಡ, ಎಸ್‌. ಮೇಘನಾ, ಮೇಘನಾ ಸಿಂಗ್‌, ಸ್ನೇಹ್ ರಾಣಾ, ರೇಣುಕಾ ಸಿಂಗ್‌, ಜೆಮಿಮಾ ರಾಡ್ರಿಗಸ್‌, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಕಾರ್, ರಾಧಾ ಯಾದವ್‌.

ಆಸ್ಟ್ರೇಲಿಯಾ: ಮೆಗ್ ಲ್ಯಾನಿಂಗ್‌(ನಾಯಕಿ), ರಚೇಲ್ ಹೇನ್ಸ್, ಡಾರ್ಸಿ ಬ್ರೌನ್‌, ನಿಕೋಲಾ ಕ್ಯಾರಿ, ಆ್ಯಶ್ಲೆ ಗಾರ್ಡನರ್‌, ಗ್ರೇಸ್ ಹ್ಯಾರಿಸ್‌, ಅಲಿಸ್ಸಾ ಹೀಲಿ, ಜೆಸ್‌ ಜೊನಾಸನ್‌, ಅಲಾನ ಕಿಂಗ್‌, ತಹ್ಲಿಯಾ ಮೆಕ್‌ಗ್ರಾ, ಬೆತ್ ಮೂನಿ, ಎಲಿಸ್ ಪೇರಿ, ಮೇಘನಾ ಶುಟ್‌, ಅನಾಬೆಲ್‌ ಸದರ್ಲೆಂಡ್‌, ಅಮಂಡಾ ಜೇಡ್‌ ವೆಲ್ಲಿಂಗ್ಟನ್‌.

ಸ್ಥಳ: ಎಜ್‌ಬಾಸ್ಟನ್‌ ಕ್ರಿಕೆಟ್‌ ಕ್ರೀಡಾಂಗಣ
ಪಂದ್ಯ ಆರಂಭ: ಮಧ್ಯಾಹ್ನ 3.30

ಮುಖಾಮುಖಿ
ಪಂದ್ಯಗಳು:
22
ಆಸ್ಟ್ರೇಲಿಯಾ ಜಯ: 16
ಭಾರತ ಗೆಲುವು: 6

ಕಳೆದ ಐದು ಪಂದ್ಯಗಳ ಫಲಿತಾಂಶ
ಆಸ್ಟ್ರೇಲಿಯಾಕ್ಕೆ 14 ರನ್‌ಗಳ ಜಯ
ಆಸ್ಟ್ರೇಲಿಯಾಕ್ಕೆ 4 ವಿಕೆಟ್‌ಗಳ ಜಯ
ಫಲಿತಾಂಶವಿಲ್ಲ
ಆಸ್ಟ್ರೇಲಿಯಾಕ್ಕೆ 85 ರನ್‌ಗಳ ಜಯ
ಭಾರತಕ್ಕೆ 17 ರನ್‌ಗಳ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.