ADVERTISEMENT

Womens WC: ಪಾಕ್ ವಿರುದ್ಧದ ಗೆಲುವಿಗೆ ಆಕೆಯ ಬೌಲಿಂಗ್ ಕಾರಣ: ಬಾಂಗ್ಲಾ ನಾಯಕಿ

ಪಿಟಿಐ
Published 3 ಅಕ್ಟೋಬರ್ 2025, 12:29 IST
Last Updated 3 ಅಕ್ಟೋಬರ್ 2025, 12:29 IST
<div class="paragraphs"><p>ವಿಕೆಟ್ ಪಡೆದ ಸಂಭ್ರಮದಲ್ಲಿ ಬಾಂಗ್ಲಾದ ಮರುಫಾ ಅಕ್ತರ್</p></div>

ವಿಕೆಟ್ ಪಡೆದ ಸಂಭ್ರಮದಲ್ಲಿ ಬಾಂಗ್ಲಾದ ಮರುಫಾ ಅಕ್ತರ್

   

ಕೊಲಂಬೊ: ನಿನ್ನೆ (ಗುರುವಾರ) ನಡೆದ ಐಸಿಸಿ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ ತಂಡ 7 ವಿಕೆಟ್‌ಗಳ ಸುಲಭ ಗೆಲುವು ದಾಖಲಿಸಿದೆ. ಈ ಜಯಕ್ಕೆ ಆತ್ಮವಿಶ್ವಾಸ ಮತ್ತು ಪ್ರಬುದ್ಧತೆಯಿಂದ ಬೌಲಿಂಗ್ ಮಾಡಿರುವ ಯುವ ವೇಗಿ ಮರೂಫಾ ಅಕ್ತರ್ ಕಾರಣ ಎಂದು ಬಾಂಗ್ಲಾದೇಶ ನಾಯಕಿ ನಿಗರ್ ಸುಲ್ತಾನ ಹೇಳಿದ್ದಾರೆ.

20 ವರ್ಷದ ಮರೂಫಾ ಅಕ್ತರ್ ಆರಂಭದಲ್ಲೆ ಪಾಕ್ ಬ್ಯಾಟರ್‌ಗಳನ್ನು ಕಾಡಿದರು. ಅವರು ತಮ್ಮ ಮೊದಲ ಓವರ್‌ನಲ್ಲೇ ಇಬ್ಬರು ಟಾಪ್ ಆರ್ಡರ್ ಆಟಗಾರ್ತಿಯರಾದ ಒಮೈಮಾ ಸೊಹೈಲ್ ಮತ್ತು ಸಿದ್ರಾ ಅಮೀನ್ ಅವರನ್ನು ಔಟ್ ಮಾಡುವ ಮೂಲಕ ಪಾಕಿಸ್ತಾನಕ್ಕೆ ಶಾಕ್ ನೀಡಿದರು.

ADVERTISEMENT

ಇದಾದ ಬಳಿಕ ಪಾಕಿಸ್ತಾನ ತಂಡ ಚೇತರಿಸಿಕೊಳ್ಳಲೇ ಇಲ್ಲ. ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಅಂತಿಮವಾಗಿ ಪಾಕಿಸ್ತಾನ 38.3 ಓವರ್‌ಗಳಲ್ಲಿ 129 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ರೂಬಿಯಾ ಹೈದರ್ ಅಜೇಯ 54 ರನ್ ಗಳಿಸಿ ಬಾಂಗ್ಲಾದೇಶಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟರು.

ಇನ್ನು, ಪಂದ್ಯದ ಗೆಲುವಿನ ಕುರಿತು ಮಾತನಾಡಿದ ಬಾಂಗ್ಲಾ ನಾಯಕಿ ನಿಗರ್ ಸುಲ್ತಾನ, 'ನಾವು ಕೂಡ ಟಾಸ್ ಗೆದ್ದಿದ್ದರೆ ಬ್ಯಾಟಿಂಗ್ ಮಾಡಲು ಬಯಸಿದ್ದೆವು. ಆದರೆ, ಟಾಸ್ ಸೋತಿರುವುದು ಕೂಡ ಒಳ್ಳೆಯದೆ ಆಯ್ತು. ಪವರ್‌ಪ್ಲೇನಲ್ಲಿ ನಮಗೆ ವಿಕೆಟ್‌ಗಳು ಬೇಕು ಎಂದು ನಮ್ಮ ಹುಡುಗಿಯರಿಗೆ ಹೇಳಿದ್ದೆ, ಅದರಂತೆ ಅವರು ಮಾಡಿದರು. ಪವರ್‌ಪ್ಲೇನಲ್ಲಿ ಮರುಫಾ ಬೌಲಿಂಗ್ ಮಾಡಿದ ರೀತಿ ಅದ್ಭುತವಾಗಿತ್ತು' ಎಂದರು.

'ಮರೂಫಾ ಚಿಕ್ಕವಳು ಆದರೆ, ತುಂಬಾ ಪ್ರಬುದ್ಧಳು. ಅವಳ ತನ್ನ ಪಾತ್ರವನ್ನು ಚೆನ್ನಾಗಿ ತಿಳಿದಿದ್ದಾಳೆ. ತುಂಬಾ ಆತ್ಮವಿಶ್ವಾಸ ಹೊಂದಿದ್ದಾಳೆ ಮತ್ತು ತಂಡದ ಪ್ರತಿಯೊಬ್ಬರೂ ಆಕೆಯನ್ನು ಬೆಂಬಲಿಸಿದರು' ಎಂದು ಪಂದ್ಯದ ನಂತರ ಸುಲ್ತಾನ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.