ADVERTISEMENT

ಮಹಿಳಾ ವಿಶ್ವಕಪ್ ಕ್ರಿಕೆಟ್ ENG vs NZ: ಎಮಿ,ಲಿನ್ಸೆ ಅಮೋಘ ಆಟ: ಇಂಗ್ಲೆಂಡ್‌ಗೆ ಜಯ

ಪಿಟಿಐ
Published 26 ಅಕ್ಟೋಬರ್ 2025, 12:28 IST
Last Updated 26 ಅಕ್ಟೋಬರ್ 2025, 12:28 IST
ಇಂಗ್ಲೆಂಡ್ ತಂಡದ ಬ್ಯಾಟರ್ ಟ್ಯಾಮಿ ಬೇಮೌಂಟ್ ಮತ್ತು ಎಮಿ ಜೋನ್ಸ್   
ಇಂಗ್ಲೆಂಡ್ ತಂಡದ ಬ್ಯಾಟರ್ ಟ್ಯಾಮಿ ಬೇಮೌಂಟ್ ಮತ್ತು ಎಮಿ ಜೋನ್ಸ್      

ವಿಶಾಖಪಟ್ಟಣಂ: ಲಿನ್ಸೆ ಸ್ಮಿತ್ ಅಮೋಘ ಬೌಲಿಂಗ್ ಮತ್ತು ಎಮಿ ಜೋನ್ಸ್ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ ಇಂಗ್ಲೆಂಡ್ ತಂಡವು ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ಜಯಭೇರಿ ಬಾರಿಸಿತು. 

ಎಸಿಎ–ವಿಡಿಸಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ  ಇಂಗ್ಲೆಂಡ್ ತಂಡವು 8 ವಿಕೆಟ್‌ಗಳಿಂದ ನ್ಯೂಜಿಲೆಂಡ್ ಎದುರು ಜಯಿಸಿತು.  ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. 

ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಲಿನ್ಸೆ ಸ್ಮಿತ್ (30ಕ್ಕೆ3) ಮತ್ತು ನ್ಯಾಟ್ ಶಿವರ್ ಬ್ರಂಟ್ (31ಕ್ಕೆ2) ಅವರ ಬೌಲಿಂಗ್‌ನಿಂದಾಗಿ ನ್ಯೂಜಿಲೆಂಡ್ ತಂಡವು 38.2 ಓವರ್‌ಗಳಲ್ಲಿ 168 ರನ್ ಗಳಿಸಿತು. ಜಾರ್ಜಿಯಾ ಫ್ಲಿಮರ್ (43 ರನ್) ಮತ್ತು ಅಮೆಲಿಯಾ ಕೆರ್ (35 ರನ್) ಆವರು ತಂಡಕ್ಕೆ ಬಲ ತುಂಬಿದರು. ಗುರಿ ಬೆನ್ನಟ್ಟಿದ ತಂಡವು ಕೇವಲ 29.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 172 ರನ್ ಗಳಿಸಿ ಸುಲಭ ಜಯಸಾಧಿಸಿತು. ಎಮಿ ಜೋನ್ಸ್ (ಔಟಾಗದೇ 86; 92ಎ, 4X11, 6X1) ಮತ್ತು ಟ್ಯಾಮಿ ಬೆಮೌಂಟ್ (40; 38ಎ, 4X7) ಉತ್ತಮ ಆರಂಭ ನೀಡಿದರು. ಇದರಿಂದಾಗಿ ತಂಡವು ಜಯಿಸಿತು. 

ADVERTISEMENT

ನ್ಯೂಜಿಲೆಂಡ್ ತಂಡವು ಈಗಾಗಲೇ ಸೆಮಿಫೈನಲ್ ರೇಸ್‌ನಿಂದ ಹೊರಬಿದ್ದಿತ್ತು. 

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 38.2 ಓವರ್‌ಗಳಲ್ಲಿ 168 (ಜಾರ್ಜಿಯಾ ಪ್ಲಿಮರ್ 43, ಅಮೆಲಿಯಾ ಕೆರ್ 35, ಸೋಫಿ ಡಿವೈನ್ 23, ಮ್ಯಾಡಿ ಗ್ರೀನ್ 18, ಲಿನ್ಸೆ ಸ್ಮಿತ್ 30ಕ್ಕೆ3, ನ್ಯಾಟ್ ಶಿವರ್ ಬ್ರಂಟ್ 31ಕ್ಕೆ2, ಅಲಿಸ್ ಕ್ಯಾಪ್ಸಿ 34ಕ್ಕೆ2) ಇಂಗ್ಲೆಂಡ್: 29.2 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 172 (ಎಮಿ ಜೋನ್ಸ್ ಔಟಾಗದೇ 86, ಟ್ಯಾಮಿ ಬೀಮೌಂಟ್ 40, ಹೀದರ್ ನೈಟ್ 33, ಸೋಫಿ ಡಿವೈನ್ 20ಕ್ಕೆ1, ಲಿಯಾ ತಹುಹು 9ಕ್ಕೆ1) ಫಲಿತಾಂಶ:  ಇಂಗ್ಲೆಂಡ್ ತಂಡಕ್ಕೆ 8 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ್ತಿ: ಎಮಿ ಜೋನ್ಸ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.