
ತಂಡದ ಸದಸ್ಯರ ಸಹಿ ಇರುವ ಜೆರ್ಸಿಯನ್ನು ನಾಯಕಿ ಹಮ್ರನ್‌ಪ್ರೀತ್ ಕೌರ್ ಅವರು ರಾಷ್ಟ್ರಪತಿಗೆ ನೀಡಿದರು.
- ಎಕ್ಸ್ ಚಿತ್ರ: ರಾಷ್ಟ್ರಪತಿ ಭವನ
ನವದೆಹಲಿ: ಮಹಿಳಾ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ರಾಷ್ಟ್ರಪತಿ ಭವನದಲ್ಲಿ ಭೇಟಿ ಮಾಡಿದರು. ತಂಡದ ಸದಸ್ಯರ ಸಹಿ ಇರುವ ಜೆರ್ಸಿಯನ್ನು ನಾಯಕಿ ಹಮ್ರನ್‌ಪ್ರೀತ್ ಕೌರ್ ಅವರು ರಾಷ್ಟ್ರಪತಿಗೆ ನೀಡಿದರು.
ಐತಿಹಾಸಿಕ ಸಾಧನೆ ಮಾಡಿದ್ದಕ್ಕೆ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಅವರು, ಆಟಗಾರರು ಇತಿಹಾಸ ರಚಿಸಿದ್ದು ಮಾತ್ರವಲ್ಲದೆ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ ಎಂದು ಹೇಳಿದ್ದಾರೆ.
‘ಇಡೀ ತಂಡ ಭಾರತವನ್ನು ಪ್ರತಿನಿಧಿಸುತ್ತದೆ. ಅವರು ದೇಶದ ವಿವಿದ ಭಾಗಗಳಿಂದ ಬಂದವರು. ವಿವಿಧ ಸಾಮಾಜಿಕ ಹಿನ್ನಲೆ ಹಾಗೂ ಭಿನ್ನ ಪರಿಸ್ಥಿತಿಯಿಂದ ಅವರದು. ಅವರೆಲ್ಲಾ ಒಂದೇ ತಂಡ –ಭಾರತ’ ಎಂದು ರಾಷ್ಟ್ರಪತಿ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಮಾತುಕತೆ ವೇಳೆ ರಾಷ್ಟ್ರಪತಿಗೆ ಕೌರ್ ಅವರು ಟ್ರೋಫಿಯನ್ನೂ ನೀಡಿದರು. ಬುಧವಾರ ತಂಡವು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿತ್ತು.
ಭಾನುವಾರ ನವಿ ಮುಂಬೈನಲ್ಲಿ ಫೈನಲ್ ಪಂದ್ಯದಲ್ಲಿ ದಕ್ಷಿಣಾ ಆಫ್ರಿಕಾವನ್ನು ಸೋಲಿಸಿ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದುಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.