ADVERTISEMENT

Women's World Cup | ಮಳೆ: ಭಾರತ–ಬಾಂಗ್ಲಾ ಪಂದ್ಯ ರದ್ದು

ಪಿಟಿಐ
Published 26 ಅಕ್ಟೋಬರ್ 2025, 16:35 IST
Last Updated 26 ಅಕ್ಟೋಬರ್ 2025, 16:35 IST
   

ನವಿ ಮುಂಬೈ: ಆತಿಥೇಯ ಭಾರತ ಮತ್ತು ಬಾಂಗ್ಲಾದೇಶ ತಂಡಗಳ ನಡುವಣ ಮಹಿಳಾ ಏಕದಿನ ವಿಶ್ವಕಪ್‌ ಟೂರ್ನಿಯ ಅಂತಿಮ ಲೀಗ್‌ ಪಂದ್ಯ ಭಾನುವಾರ ಮಳೆಯಿಂದಾಗಿ ಅಪೂರ್ಣ ಗೊಂಡಿತು. ಎರಡೂ ತಂಡಗಳು ತಲಾ ಒಂದು ಪಾಯಿಂಟ್‌ ಪಡೆದವು.

ಇದಕ್ಕೂ ಮೊದಲು, ಮಳೆಯಿಂದಾಗಿ ವಿಳಂಬವಾಗಿ ಆರಂಭವಾದ ಪಂದ್ಯದ ಇನಿಂಗ್ಸ್ ಅನ್ನು 27 ಓವರ್‌ಗಳಿಗೆ ನಿಗದಿ ಮಾಡಲಾಯಿತು. ರಾಧಾ ಯಾದವ್ (30ಕ್ಕೆ3) ಮತ್ತು ಶ್ರೀಚರಣಿ (23ಕ್ಕೆ2) ಅವರ ಸ್ಪಿನ್ ಮೋಡಿಯ ಮುಂದೆ ಬಾಂಗ್ಲಾ ತಂಡವು 9 ವಿಕೆಟ್‌ಗಳಿಗೆ 119 ರನ್ ಗಳಿಸಿತು. ಸುಲಭ ಗುರಿ ಬೆನ್ನಟ್ಟಿದ ಹರ್ಮನ್‌ಪ್ರೀತ್‌ ಕೌರ್‌ ಬಳಗವು, ಸ್ಮೃತಿ ಮಂದಾನ (ಔಟಾಗದೇ 35) ಹಾಗೂ ಅಮನ್ಜೋತ್‌ ಕೌರ್‌ (ಔಟಾಗದೇ 15) ಅವರ ಬಿರುಸಿನ ಆಟದ ನೆರವಿನಿಂದ 8.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 57 ರನ್‌ ಗಳಿಸಿತ್ತು.

ಆದರೆ, ಮತ್ತೆ ಮಳೆ ಆರಂಭವಾಗಿ ಬಿಡುವಿಲ್ಲದೆ ಸುರಿದಿದ್ದರಿಂದ ಅಂಪೈರ್‌ ಗಳು ಪಂದ್ಯ ರದ್ದುಗೊಳಿಸಿದರು. ಈಗಾಗಲೇ ಸೆಮಿಫೈನಲ್ ಪ್ರವೇಶಿಸಿರುವ ಭಾರತ ತಂಡಕ್ಕೆ ಈ ಪಂದ್ಯವು ಔಪಚಾರಿಕವಾಗಿತ್ತು.

ADVERTISEMENT

ಈ ಮಧ್ಯೆ, ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್‌ ಅವರು ಫೀಲ್ಡಿಂಗ್‌ ವೇಳೆ  ಪಾದ ಮತ್ತು ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದು, ಭಾರತ ತಂಡವನ್ನು ಚಿಂತೆಗೀಡು ಮಾಡಿದೆ. 

ಸಂಕ್ಷಿಪ್ತ ಸ್ಕೋರು: ಬಾಂಗ್ಲಾದೇಶ: 27 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 119 (ಶಮೀನ್ ಅಖ್ತರ್ 36, ಶೋಭನಾ ಮೊಸ್ತಾರಿ 26, ಶ್ರೀಚರಣಿ 23ಕ್ಕೆ2, ರಾಧಾ ಯಾದವ್ 30ಕ್ಕೆ3). ಭಾರತ: 8.4 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 57 (ಸ್ಮೃತಿ ಮಂದಾನ ಔಟಾಗದೇ 35, ಅಮನ್ಜೋತ್‌ ಕೌರ್‌ ಔಟಾಗದೇ 15). ಫಲಿತಾಂಶ: ಪಂದ್ಯ ರದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.