ADVERTISEMENT

ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಎರಡು ಶತಕ: ಬಟ್ಲರ್‌, ರೂಟ್ ರೋಚಕ ಪ್ರದರ್ಶನ

ಇಂಗ್ಲೆಂಡ್‌–ಪಾಕಿಸ್ತಾನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 14:46 IST
Last Updated 13 ಜೂನ್ 2019, 14:46 IST
   

ನಾಟಿಂಗಂ:ಇಲ್ಲಿನ ಟ್ರೆಂಟ್‌ಬ್ರಿಜ್‌ನಲ್ಲಿ ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್‌ನ ಜೋ ರೂಟ್‌ ಶತಕ ಸಾಧನೆ ಮಾಡಿದ್ದಾರೆ. ಈ ಮೂಲಕ 2019ರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮೊದಲ ಶತಕ ಪೂರೈಸಿದಹೆಗ್ಗಳಿಕೆ ಪಡೆದಿದ್ದಾರೆ.

ಪಾಕಿಸ್ತಾನ ನೀಡಿದ 349ರನ್‌ ಗೆಲುವಿನ ಗುರಿ ಬೆನ್ನತ್ತಿರುವಇಂಗ್ಲೆಂಡ್‌ ತಂಡಕ್ಕೆ ಆಸರೆಯಾಗಿ ನಿಂತ ರೂಟ್‌ 100 ರನ್‌ ಪೂರೈಸಿದ್ದು, ತಂಡದ ಗೆಲುವಿಗಾಗಿ ತೀವ್ರ ಹೋರಾಟ ನಡೆಸಿದರು. ಇದೇ ಹೋರಾಟದಲ್ಲಿ ರೂಟ್‌ಗೆ ಜತೆಯಾದ ಜೋಸ್‌ ಬಟ್ಲರ್ ಟೂರ್ನಿಯ ಎರಡನೇ ಶತಕ ‍ಪೂರೈಸಿದರು.

ರೂಟ್‌ 104 ಎಸತೆಗಳಲ್ಲಿ 107 ರನ್‌ ಗಳಿಸಿದರು. ಶತಕವು 10 ಬೌಂಡರಿ ಹಾಗೂ ಒಂದು ಸಿಕ್ಸರ್‌ ಒಳಗೊಂಡಿದೆ.38ನೇ ಓವರ್‌ನಲ್ಲಿ ಶದಾಬ್‌ ಖಾನ್‌ ಎಸೆತದಲ್ಲಿ ರೂಟ್‌ ಆಟ ಅಂತ್ಯಗೊಳಿಸಿದರು.

ADVERTISEMENT

ಕ್ಷಣಕ್ಷಣದ ಸ್ಕೋರ್‌:https://bit.ly/2QFwVtL

ಭರ್ಜರಿ ಬ್ಯಾಟಿಂಗ್‌‍ಪ್ರದರ್ಶನ ತೋರಿದ ಜೋಸ್‌ ಬಟ್ಲರ್‌, 75ಎಸೆತಗಳಲ್ಲಿ ಶತಕ ಗಳಿಸಿ ಸಂಭ್ರಮಿಸಿದರು. ಎರಡು ಸಿಕ್ಸರ್‌ ಹಾಗೂ 9 ಬೌಂಡರಿ ಒಳಗೊಂಡಂತೆ 103 ರನ್‌ ಗಳಿಸಿದ್ದಾರೆ. ಒಂದೇ ಪಂದ್ಯದಲ್ಲಿ ಎರಡು ಶತಕ ಸಾಧನೆ ದಾಖಲಾಗಿರುವುದು ಈ ಟೂರ್ನಿಯ ವಿಶೇಷಗಳಲ್ಲೊಂದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.