ADVERTISEMENT

WPL 2026: ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ ಪ್ರಮುಖರನ್ನೇ ಹೊರಗಿಟ್ಟ ತಂಡಗಳು

ಎಲ್ಲ ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಪ್ರಕಟ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ನವೆಂಬರ್ 2025, 2:12 IST
Last Updated 7 ನವೆಂಬರ್ 2025, 2:12 IST
<div class="paragraphs"><p>2024ರಲ್ಲಿ ಪ್ರಶಸ್ತಿ ಗೆದ್ದ ಆರ್‌ಸಿಬಿ ತಂಡ</p></div>

2024ರಲ್ಲಿ ಪ್ರಶಸ್ತಿ ಗೆದ್ದ ಆರ್‌ಸಿಬಿ ತಂಡ

   

ಕೃಪೆ: ಪಿಟಿಐ

ಮಹಿಳಾ ಪ್ರೀಮಿಯರ್‌ ಲೀಗ್‌ನಲ್ಲಿ (ಡಬ್ಲ್ಯುಪಿಎಲ್‌) ಆಡುವ ಐದು ತಂಡಗಳು, ಹರಾಜಿಗೆ ಬಿಡದೆ ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಿವೆ. ಇದರೊಂದಿಗೆ, ಇದೇ ತಿಂಗಳು ನಡೆಯುವ ಹರಾಜು ಪ್ರಕ್ರಿಯೆಗೆ ದಿನಗಣನೆ ಆರಂಭವಾಗಿದೆ.

ADVERTISEMENT

ಪ್ರತಿ ಪ್ರಾಂಚೈಸಿಗೂ, ಮೂವರು ಭಾರತೀಯರು ಹಾಗೂ ಇಬ್ಬರು ವಿದೇಶಿಯರನ್ನೊಳಗೊಂಡಂತೆ ಗರಿಷ್ಠ ಐವರು ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶವಿತ್ತು. ಅದರಂತೆ, ಯಾವುದೇ ಪ್ರಾಂಚೈಸಿ ಐದೂ ಆಟಗಾರರನ್ನು ಉಳಿಸಿಕೊಳ್ಳಲು ಬಯಸಿದರೆ, ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡದ ಒಬ್ಬರನ್ನು ಸೇರಿಸಿಕೊಳ್ಳುವುದು ಕಡ್ಡಾಯ.

ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಕಳೆದ ಮೂರು ಆವೃತ್ತಿಗಳಲ್ಲೂ ಫೈನಲ್‌ಗೆ ಮುನ್ನಡೆಸಿದ್ದ ನಾಯಕಿ ಮೆಗ್‌ ಲ್ಯಾನಿಂಗ್ ಅವರನ್ನೇ ಕೈಬಿಡಲಾಗಿದೆ.

ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದ ಭಾರತ ತಂಡದ ಪರ ಆಡಿದ್ದ ಪ್ರಮುಖರಾದ ದೀಪ್ತಿ ಶರ್ಮಾ, ರೇಣುಕಾ ಸಿಂಗ್, ಶ್ರೀ ಚರಣಿ, ರಾಧಾ ಯಾದವ್‌, ಹರ್ಲೀನ್‌ ಡಿಯೋಲ್‌, ಕ್ರಾಂತಿ ಗೌಡ್‌ ಅವರನ್ನೇ ಪ್ರಾಂಚೈಸಿಗಳು ಹೊರಗಿಟ್ಟಿವೆ. ದೀಪ್ತಿ ಅವರು, ವಿಶ್ವಕಪ್ ಟೂರ್ನಿಯಲ್ಲಿ 'ಸರಣಿ ಶ್ರೇಷ್ಠ' ಆಟಗಾರ್ತಿಯಾಗಿದ್ದರು.

ಹರಾಜು ಪ್ರಕ್ರಿಯೆ ನವದೆಹಲಿಯಲ್ಲಿ ಇದೇ ತಿಂಗಳು (ನವೆಂಬರ್‌) 27ರಂದು ನಡೆಯಲಿದೆ.

ತಂಡದಲ್ಲೇ ಉಳಿದವರು
ಮುಂಬೈ ಇಂಡಿಯನ್ಸ್‌
1. ನತಾಲಿ ಶೀವರ್‌ ಬ್ರಂಟ್‌ – ₹ 3.5 ಕೋಟಿ
2. ಹರ್ಮನ್‌ಪ್ರೀತ್‌ ಕೌರ್‌ – ₹ 2.5 ಕೋಟಿ
3. ಹೀಲಿ ಮ್ಯಾಥ್ಯೂಸ್‌ – ₹ 1.75 ಕೋಟಿ
4. ಅಮನ್ಜೋತ್‌ ಕೌರ್‌ – ₹ 1 ಕೋಟಿ
5. ಜಿ. ಕಮಲಿನಿ – ₹ 50 ಲಕ್ಷ

ಕೈಬಿಟ್ಟ ಪ್ರಮುಖರು
ಅಮೆಲಿಯಾ ಕರ್‌, ಯಸ್ತಿಕಾ ಭಾಟಿಯಾ, ಸಿ. ಟ್ರಯಾನ್‌, ಶಬ್ನಿಮ್‌ ಇಸ್ಮಾಯಿಲ್‌

ಪರ್ಸ್‌ನಲ್ಲಿ ಉಳಿದದ್ದು: ₹ 5.75 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್‌
1.
ಜೆಮಿಮಾ ರಾಡ್ರಿಗಸ್ – ₹ 2.2 ಕೋಟಿ
2. ಶೆಫಾಲಿ ವರ್ಮಾ – ₹ 2.2 ಕೋಟಿ
3. ಅನ್ನಾಬೆಲ್‌ ಸುದರ್‌ಲ್ಯಾಂಡ್‌ – ₹ 2.2 ಕೋಟಿ
4. ಮರಿಝನ್‌ ಕಾಪ್‌ – ₹ 2.2 ಕೋಟಿ
5. ನಿಕಿ ಪ್ರಸಾದ್‌ – ₹ 50 ಲಕ್ಷ

ಪರ್ಸ್‌ನಲ್ಲಿ ಉಳಿದದ್ದು: ₹ 5.7 ಕೋಟಿ

ಕೈಬಿಟ್ಟ ಪ್ರಮುಖರು
ಮೆಗ್‌ ಲ್ಯಾನಿಂಗ್, ಶ್ರೀ ಚರಣಿ, ರಾಧಾ ಯಾದವ್‌, ಅರುಂಧತಿ ರೆಡ್ಡಿ

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು
1. ಸ್ಮೃತಿ ಮಂದಾನ – ₹ 3.5 ಕೋಟಿ
2. ರಿಚಾ ಘೋಷ್‌ – ₹ 2.75 ಕೋಟಿ
3. ಎಲಿಸ್‌ ಪೆರಿ – ₹ 2 ಕೋಟಿ
4. ಶ್ರೇಯಾಂಕಾ ಪಾಟಿಲ್‌ – ₹ 60 ಲಕ್ಷ

ಪರ್ಸ್‌ನಲ್ಲಿ ಉಳಿದದ್ದು: ₹ 6.15 ಕೋಟಿ

ಕೈಬಿಟ್ಟ ಪ್ರಮುಖರು
ರೇಣುಕಾ ಸಿಂಗ್‌, ಸೋಫಿ ಡಿವೈನ್‌, ಸೋಫಿ ಮೊಲಿನಿ, ಡ್ಯಾನಿ ವ್ಯಾಟ್‌

ಗುಜರಾತ್‌ ಜೈಂಟ್ಸ್‌
1. ಅಶ್ಲೇ ಗಾರ್ಡ್ನರ್‌ – ₹ 3.5 ಕೋಟಿ
2. ಬೆತ್‌ ಮೂನಿ – ₹ 2.5 ಕೋಟಿ

ಪರ್ಸ್‌ನಲ್ಲಿ ಉಳಿದದ್ದು: ₹ 9 ಕೋಟಿ

ಕೈಬಿಟ್ಟ ಪ್ರಮುಖರು
ಹರ್ಲೀನ್‌ ಡಿಯೋಲ್‌, ಡಿಯೊಂಡ್ರ ಡಾಟಿನ್‌, ಲೌರಾ ವೊಲ್ವಾರ್ಡ್ಟ್‌, ಫೊಯೆಬೆ ಲಿಚ್‌ಫೀಲ್ಡ್‌

ಯುಪಿ ವಾರಿಯರ್ಸ್‌
1. ಶ್ವೇತಾ ಶೆರಾವತ್‌ – ₹ 50 ಲಕ್ಷ

ಪರ್ಸ್‌ನಲ್ಲಿ ಉಳಿದದ್ದು: ₹ 14.50 ಕೋಟಿ

ಕೈಬಿಟ್ಟ ಪ್ರಮುಖರು
ದೀಪ್ತಿ ಶರ್ಮಾ, ಅಲಿಸ್ಸಾ ಹೀಲಿ, ಸೋಫಿ ಎಕ್ಲೆಸ್ಟೋನ್‌, ತಹ್ಲಿಯಾ ಮೆಗ್‌ಗ್ರಾಥ್, ಅಲನಾ ಕಿಂಗ್‌, ಕ್ರಾಂತಿ ಗೌಡ್‌, ಚಿನೆಲ್ಲೆ ಹೆನ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.