ಚೆನ್ನೈ ಸೂಪರ್ ಕಿಂಗ್ಸ್ ಕೋಚ್ ಸ್ಟೀಫನ್ ಫ್ಲೆಮಿಂಗ್
ಪಿಟಿಐ ಚಿತ್ರ
ಚೆನ್ನೈ: ಯುವ ಆಟಗಾರರು ಕೆಲವೊಮ್ಮೆ ಸ್ಪಿನ್ ಬೌಲಿಂಗ್ ಎದುರು ಬ್ಯಾಟಿಂಗ್ ಮಾಡಲು ಹೆಣಗಾಡುತ್ತಾರೆ. ಸ್ಪಿನ್ನರ್‌ಗಳನ್ನು ಎದುರಿಸುವುದು ಹೇಗೆ ಎಂಬ ಸೂಕ್ಷ್ಮತೆಯ ಕೊರತೆ ಅವರನ್ನು ಕಾಡುತ್ತಿದೆ ಎಂದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.
ಐಪಿಎಲ್‌ನಲ್ಲಿ ಐದು ಬಾರಿ ಪ್ರಶಸ್ತಿ ಗೆದ್ದಿರುವ ಸಿಎಸ್‌ಕೆ ತಂಡದ ಕೋಚ್, 'ಹೆಚ್ಚಿನ ಆಟಗಾರರು, ಪ್ರಥಮ ದರ್ಜೆ ಕ್ರಿಕೆಟ್‌ನ ಒಂದು ಅಥವಾ ಹೆಚ್ಚೆಂದರೆ ಎರಡು ಆವೃತ್ತಿಗಳನ್ನು ಆಡಿ ನೇರವಾಗಿ ಬಂದಿರುತ್ತಾರೆ. ಅವರಿಗೆ ಭದ್ರ ತಳಪಾಯವಿರುವುದಿಲ್ಲ. ಪ್ರಥಮ ದರ್ಜೆ ಕ್ರಿಕೆಟ್‌ನ ಅನುಭವ ಇರುವುದಿಲ್ಲ' ಎಂದು ಅಭಿಪ್ರಾಯ ಪಟ್ಟಿದ್ದಾರೆ.
'ಆದಾಗ್ಯೂ, ಅಪಾರ ಸಾಮರ್ಥ್ಯ ಹೊಂದಿರುವ ಕಾರಣ, ಚೆಂಡನ್ನು ಹೇಗೆ ಬಾರಿಸಬೇಕು ಮತ್ತು ದೂರಕ್ಕೆ ಕಳುಹಿಸಬೇಕು ಎಂಬುದು ಅವರಿಗೆ ಗೊತ್ತಿದೆ. ಆದರೆ, ಆಟದ ಸೂಕ್ಷ್ಮತೆಯು ಅನುಭವದಿಂದ ಬರುವಂತಹದ್ದು. ಸಣ್ಣವರಿದ್ದಾಗಲೇ ನಿಮಗೆ ದೊಡ್ಡ ಅವಕಾಶಗಳನ್ನು ನೀಡಿದರೆ, ನುರಿತ ಬೌಲರ್‌ಗಳ ಎದುರು ಆಡುವ ಅನುಭವದ ಕೊರತೆ ಕಾಡಲಿದೆ' ಎಂದಿದ್ದಾರೆ. ಆ ಮೂಲಕ ಯುವ ಆಟಗಾರರು ಹೆಚ್ಚಾಗಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಆಡಬೇಕು ಎಂದು ಪ್ರತಿಪಾದಿಸಿದ್ದಾರೆ.
ಐಪಿಎಲ್‌ನಲ್ಲಿ ಆಡುತ್ತಿರುವ ಹೆಚ್ಚಿನ ಆಟಗಾರರು ಮೊದಲ ಬಾರಿಗೆ ಅತ್ಯುತ್ತಮ ಬೌಲರ್‌ಗಳನ್ನು ಎದುರಿಸುತ್ತಿದ್ದಾರೆ. ಅದು ಸವಾಲಿನ ವಿಚಾರ. ಆದರೆ, ಒಳಗಿನಿಂದ ಸಾಮರ್ಥ್ಯವಿದ್ದಾಗ ಬುದ್ಧಿವಂತಿಕೆಯಿಂದ ಆಡಬೇಕಾಗುತ್ತದೆ ಎಂದು ಯುವ ಆಟಗಾರರಿಗೆ ಕಿವಿಮಾತು ಹೇಳಿದ್ದಾರೆ.
ಸಿಎಸ್‌ಕೆ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಇಂದು ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಸೆಣಸಾಟ ನಡೆಸಲಿವೆ. ಸಿಎಸ್‌ಕೆ ಕಳೆದ 16 ವರ್ಷಗಳಿಂದ ಆರ್‌ಸಿಬಿ ಎದುರು ತವರಿನಲ್ಲಿ ಒಮ್ಮೆಯೂ ಸೋತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.