
ಕೊಲಂಬೊ: ಟಿ–20 ವಿಶ್ವಕಪ್‌ನ ಲೀಗ್ ಹಂತದ ‘ಬಿ’ಗುಂಪಿನ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ. ಕ್ರಿಕೆಟ್ ಜಗತ್ತಿನ ಬಲಾಢ್ಯ ತಂಡಗಳಲ್ಲಿ ಒಂದಾದ, ಆಸ್ಟ್ರೇಲಿಯಾ ವಿರುದ್ಧ ಜಿಂಬಾಬ್ವೆ ತಂಡವು 23 ರನ್‌ಗಳ ಸುಲಭ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡವು ಆರಂಭಿಕ ಆಟಗಾರರಾದ ರಯಾನ್ ಬರ್ಲ್ (64 ರನ್; 56 ಎಸೆತ) ಹಾಗೂ ಮರುಮಾನಿ(35 ರನ್; 21 ಎಸೆತ) ಉತ್ತಮ ಆರಂಭ ಒದಗಿಸಿದರು.
ರಯಾನ್ ಬರ್ಲ್ (35 ರನ್; 30 ಎಸೆತ) ಹಾಗೂ ಡೆತ್ ಓವರ್‌ನಲ್ಲಿ ಸ್ಪೋಟಕ ಆಟವಾಡಿದ ನಾಯಕ ಸಿಂಕದರ್ ರಝಾ 13 ಎಸೆತಗಳಲ್ಲಿ 25 ರನ್ ಗಳಿಸಿದರು. ಅನಾನುಭವಿ ಆಸೀಸ್ ಬೌಲರ್‌ಗಳನ್ನು ಬೆಂಡೆತ್ತಿದ ಜಿಂಬಾಬ್ವೆ ಬ್ಯಾಟರ್‌ಗಳು 20 ಓವರ್‌ಗಳ ಅಂತ್ಯಕ್ಕೆ 169 ರನ್‌ಗಳಿದರು.
170 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಆಟಗಾರ ಜೋಶ್ ಇಂಗ್ಲಿಸ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಗ್ರೀನ್ ಹಾಗೂ ಟೀಮ್ ಡೆವಿಡ್ ಶೂನ್ಯಕ್ಕೆ ನಿರ್ಗಮಿಸಿದರು.
ಅನುಭವಿ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ (31 ರನ್) ಹಾಗೂ ಮ್ಯಾಟ್ ರೆನ್ಶಾ(65 ರನ್) ಕೆಲಕಾಲ ಜಿಂಬಾಬ್ವೆ ಬೌಲರ್‌ಗಳನ್ನು ಕಾಡಿದರು.
ಆದರೆ, ಶಿಸ್ತಿನ ಬೌಲಿಂಗ್ ನಡೆಸಿದ ಜಿಂಬಾಬ್ವೆ, ಆಸೀಸ್ ಪಡೆಯನ್ನು 19.3 ಓವರ್‌ಗಳಲ್ಲಿ 146 ರನ್‌ಗಳಿಗೆ ಕಟ್ಟಿಹಾಕುವ ಮೂಲಕ 23 ರನ್‌ಗಳ ಗೆಲುವು ಸಾಧಿಸಿತು.
ಚುಟುಕು ವಿಶ್ವಕಪ್‌ನಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲವು ಸಾಧಿಸುವ ಮೂಲಕ ಜಿಂಬಾಬ್ವೆ ತಂಡವು ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನಕ್ಕೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.