ADVERTISEMENT

ಮಹಿಳೆಯರ ಏಷ್ಯಾಕಪ್: ಕ್ವಾರಂಟೈನ್‌ನಿಂದ ವಿನಾಯಿತಿ

ಪಿಟಿಐ
Published 8 ಜನವರಿ 2022, 16:29 IST
Last Updated 8 ಜನವರಿ 2022, 16:29 IST
ಫುಟ್‌ಬಾಲ್‌
ಫುಟ್‌ಬಾಲ್‌   

ನವದೆಹಲಿ: ದೇಶದ ಮೂರು ನಗರಗಳಲ್ಲಿ ನಡೆಯಲಿರುವ ಮಹಿಳೆಯರಎಎಫ್‌ಸಿ ಏಷ್ಯಾಕಪ್ ಫುಟ್‌ಬಾಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ ತಂಡಗಳ ಆಟಗಾರ್ತಿಯರು ಪ್ರತ್ಯೇಕವಾಸದಲ್ಲಿ ಇರಬೇಕಾದ ಅಗತ್ಯವಿಲ್ಲ ಎಂದು ಸರ್ಕಾರ ಶನಿವಾರ ತಿಳಿಸಿದೆ. ತಂಡಗಳು ಬಯೊಬಬಲ್‌ನಿಂದ ಬಯೊಬಬಲ್‌ಗೆ ಹೋದರೆ ಸಾಕು ಎಂದು ಆಯೋಜಕರು ತಿಳಿಸಿದ್ದಾರೆ.

ವಿದೇಶದಿಂದ ಭಾರತಕ್ಕೆ ಬರುವವರು ಏಳು ದಿನ ಕಡ್ಡಾಯವಾಗಿ ಮನೆಯಲ್ಲಿ ಪ್ರತ್ಯೇಕವಾಸದಲ್ಲಿರಬೇಕು ಎಂದು ಸರ್ಕಾರ ಶುಕ್ರವಾರ ಸೂಚಿಸಿತ್ತು. ಜನವರಿ 11ರಿಂದ ಈ ಆದೇಶ ಜಾರಿಗೆ ಬರಲಿದೆ. ಆಟಗಾರ್ತಿಯರು ತಂಡಗಳು ಉಳಿದುಕೊಂಡಿರುವ ಹೋಟೆಲ್‌ನಲ್ಲಿ ಇರಬೇಕು. ಹೋಟೆಲ್‌ಗಳನ್ನು ಬಯೊಬಬಲ್ ಆಗಿ ಪರಿವರ್ತಿಸಲಾಗುತ್ತಿದೆ. ಕೋವಿಡ್ ಪರೀಕ್ಷೆಯ ವರದಿ ನೆಗೆಟಿವ್ ಆದರಷ್ಟೇ ಹೊರಬರಲು ಅವಕಾಶ ನೀಡಲಾಗುವುದು ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ಕುಶಾಲ್ ದಾಸ್ ತಿಳಿಸಿದ್ದಾರೆ.

ಇದೇ 20ರಿಂದ ಫೆಬ್ರುವರಿ 6ರ ವರೆಗೆ ಮುಂಬೈ, ನವಿ ಮುಂಬೈ ಮತ್ತು ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ. ಭಾರತ, ಆಸ್ಟ್ರೇಲಿಯಾ, ಚೀನಾ, ಚೀನಾ ಥೈಪೆ, ವಿಯೆಟ್ನಾಂ, ಇಂಡೊನೇಷ್ಯಾ, ಮ್ಯಾನ್ಮಾರ್, ದಕ್ಷಿಣ ಕೊರಿಯಾ, ಫಿಲಿಪ್ಪೈನ್ಸ್‌, ಇರಾನ್‌, ಥಾಯ್ಲೆಂಡ್‌ ಮತ್ತು ಹಾಲಿ ಚಾಂಪಿಯನ್ ಜಪಾನ್‌ ತಂಡಗಳು ಟೂರ್ನಿಯಲ್ಲಿ ಸೆಣಸಲಿವೆ. 1979 ಮತ್ತು 1983ರಲ್ಲಿ ರನ್ನರ್ ಅಪ್‌ ಆಗಿರುವುದು ಭಾರತ ಈ ವರೆಗಿನ ಗರಿಷ್ಠ ಸಾಧನೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.