ADVERTISEMENT

ಫುಟ್‌ಬಾಲ್: ಬಿಎಫ್‌ಸಿ ಜಯಭೇರಿ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 22:14 IST
Last Updated 30 ಡಿಸೆಂಬರ್ 2019, 22:14 IST
ಎಡಿಇ ತಂಡದ ಸಲೀಂ (ಎಡ) ಅವರಿಂದ ಚೆಂಡು ಕಸಿದುಕೊಂಡು ಬಿಎಫ್‌ಸಿಯ ವಿಶ್ವಾಸ್‌ ದಾರ್ಜಿ ಮುನ್ನುಗ್ಗಿದ ರೀತಿ –ಪ್ರಜಾವಾಣಿ ಚಿತ್ರ
ಎಡಿಇ ತಂಡದ ಸಲೀಂ (ಎಡ) ಅವರಿಂದ ಚೆಂಡು ಕಸಿದುಕೊಂಡು ಬಿಎಫ್‌ಸಿಯ ವಿಶ್ವಾಸ್‌ ದಾರ್ಜಿ ಮುನ್ನುಗ್ಗಿದ ರೀತಿ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಎಫ್‌ಸಿ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ನಡೆಯುತ್ತಿರುವ ಜಾರ್ಜ್ ಹೂವರ್‌ ಕಪ್ ಮತ್ತು ಜಿ.ಎಂ.ಭಾಷಾ ಕಪ್‌ ಸೂಪರ್ ಡಿವಿಷನ್ಫುಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ಜಯಭೇರಿ ಮೊಳಗಿಸಿತು.

ಎಡಿಇ ಎಫ್‌ಸಿ ತಂಡದ ವಿರುದ್ಧ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಶ್ವಾಸ್‌ ದಾರ್ಜಿ (27ನೇ ನಿಮಿಷ) ಗಳಿಸಿದ ಗೋಲಿನ ಮೂಲಕ ಬಿಎಫ್‌ಸಿ 1–0 ಅಂತರದ ಜಯ ಸಾಧಿಸಿತು.

ವಿಶ್ವಾಸ್‌ ಗಳಿಸಿದ ಗೋಲಿನ ನಂತರ ಪಂದ್ಯದಲ್ಲಿ ಸಮಬಲ ಸಾಧಿಸಲು ಎಡಿಇ ತಂಡಕ್ಕೆ ಉತ್ತಮ ಅವಕಾಶ ಲಭಿಸಿತ್ತು. ಆದರೆ ಅದನ್ನು ಸದುಪ‍ಯೋಗಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ‘ಡಿ’ ವಲಯದಲ್ಲಿ ಬಿಎಫ್‌ಸಿ ಆಟಗಾರ ಎಸಗಿದ ತಪ್ಪಿಗೆ ರೆಫರಿ ಕಮಲ್, ಪೆನಾಲ್ಟಿ ನೀಡಿದರು. ಸ್ಟೀಫನ್ ರಾಜ್‌ಕಿರಣ್ ಒದ್ದ ಚೆಂಡನ್ನು ಬಿಎಫ್‌ಸಿ ಗೋಲ್‌ಕೀಪರ್ ಆದಿತ್ಯ ಪಾತ್ರಾ ಮೋಹಕವಾಗಿ ತಡೆದು ತಂಡವನ್ನು ಅಪಾಯದಿಂದ ರಕ್ಷಿಸಿದರು.

ADVERTISEMENT

ಮಂಗಳವಾರ ಮಧ್ಯಾಹ್ನ 1.30ಕ್ಕೆ ಸೌತ್ ಯುನೈಟೆಡ್ ಎಫ್‌ಸಿ ಮತ್ತು ಎಜಿಒಆರ್‌ಸಿ ಎಫ್‌ಸಿ ತಂಡಗಳು ಸೆಣಸಲಿದ್ದು 3.30ಕ್ಕೆ ಎಂಇಜಿ ಆ್ಯಂಡ್ ಸೆಂಟರ್‌ ಎಫ್‌ಸಿ ಮತ್ತು ಓಜೋನ್ ಎಫ್‌ಸಿ ನಡುವೆ ಪಂದ್ಯ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.